ಸ್ಯಾಮ್ಸಂಗ್ ಮೊಬೈಲ್ ಮೇಲೆ ಏರ್ಟೆಲ್, ವೊಡಾಫೋನ್ ಕ್ಯಾಷ್ ಬ್ಯಾಕ್ ಕೊಡುಗೆ |News Mirchi

ಸ್ಯಾಮ್ಸಂಗ್ ಮೊಬೈಲ್ ಮೇಲೆ ಏರ್ಟೆಲ್, ವೊಡಾಫೋನ್ ಕ್ಯಾಷ್ ಬ್ಯಾಕ್ ಕೊಡುಗೆ

ಸ್ಮಾರ್ಟ್ ಫೋನ್ ಗ್ರಾಹಕರನ್ನು ಮತ್ತಷ್ಟು ಸೆಳೆಯಲು ಟೆಲಿಕಾಂ ದಿಗ್ಗಜ ಕಂಪನಿಗಳಾದ ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಪ್ರಮುಖ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಯಾದ ಸ್ಯಾಮ್ಸಂಗ್ ನೊಂದಿಗೆ ಕೈಜೋಡಿಸಿವೆ. ಸ್ಯಾಮ್ಸಂಗ್ ನ ಗ್ಯಾಲಾಕ್ಸಿ-ಜೆ ಸರಣಿಯ ಸ್ಮಾರ್ಟ್ ಫೋನ್ ಗಳ ಮೇಲೆ ಎರಡು ವರ್ಷಗಳ ಅವಧಿಗೆ ರೂ. 1,500 ಮೌಲ್ಯದ ಕ್ಯಾಷ್ ಬ್ಯಾಕ್ ಆಫರ್ ಪ್ರಕಟಿಸಿವೆ.

ಗ್ಯಾಲಾಕ್ಸಿ-ಪ್ರೈಮ್, ಗ್ಯಾಲಾಕ್ಸಿ-ಜೆ7 ಪ್ರೋ ಮಾದರಿಗಳ ಮೇಲೆ ಏರ್ಟೆಲ್ ಆಫರ್ ಪ್ರಕಟಿಸಿದೆ. 8,490 ರೂಪಾಯಿಗಳಿಂದ ರೂ.16,900 ರವರೆಗಿನ ಬೆಲೆ ಹೊಂದಿರುವ ಗ್ಯಾಲಾಕ್ಸಿ ಜೆ2 ಪ್ರೋ, ಗ್ಯಾಲಾಕ್ಸಿ ಜೆ7 ನೆಕ್ಸ್ಟ್, ಗ್ಯಾಲಾಕ್ಸಿ ಜೆ7 ಮಾದರಿಗಳ ಮೇಲೆ ವೊಡಾಫೋನ್ ಕ್ಯಾಷ್ ಬ್ಯಾಕ್ ಆಫರ್ ಪ್ರಕಟಿಸಿದೆ.

ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ಖರೀದಿಸಿರುವ ಏರ್ಟೆಲ್ ಗ್ರಾಹಕರು ಪ್ರತಿ ತಿಂಗಳು ರೂ.199 ರ ರೀಚಾರ್ಜ್ ಮಾಡಿಸಿಕೊಂಡರೆ ದೇಶಾದ್ಯಂತ ಅನಿಯಮಿತ ಕರೆ, ಪ್ರತಿದಿನ 1 ಜಿಬಿ ಡಾಟಾ ಪಡೆಯುತ್ತಾರೆ. ಹೀಗೆ ಒಟ್ಟು ಎರಡು ವರ್ಷಗಳಲ್ಲಿ ಏರ್ಟೆಲ್ ಗ್ರಾಹಕರು ಒಟ್ಟು ರೂ.5,000 ರೂಪಾಯಿ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗುತ್ತದೆ.

ಇನ್ನು ವೊಡಾಫೋನ್ ಗ್ರಾಹಕರು ಪ್ರತಿ ತಿಂಗಳು ರೂ.198 ರೀಚಾರ್ಜ್ ಮಾಡಿಕೊಳ್ಳುವ ಮೂಲಕ (2 ವರ್ಷಗಳಿಗೆ ರೂ.4,752) ಸಂಪೂರ್ಣ ಕ್ಯಾಷ್ ಬ್ಯಾಕ್ ಆಫರ್ ಅನ್ನು ಪಡೆಯುತ್ತಾರೆ ಎಂದು ಪ್ರಕಟಣೆ ಹೇಳಿದೆ.

ಎರಡು ವರ್ಷಗಳ ಅವಧಿಯಲ್ಲಿ ಗ್ರಾಹಕರು ರೂ.1,500 ಕ್ಯಾಷ್ ಬ್ಯಾಕ್ ಪಡೆಯುತ್ತಾರೆ. ಒಂದು ವರ್ಷದ ಅವಧಿಯಲ್ಲಿ ಒಟ್ಟು ರೂ.2500 ರೀಚಾರ್ಜ್ ಮಾಡಿಕೊಂಡವರಿಗೆ ಒಂದು ವರ್ಷ ಮುಗಿದ ನಂತರ ರೂ.300 ಕ್ಯಾಷ್ ಬ್ಯಾಕ್ ಲಭಿಸಲಿದೆ. ಹಾಗೆಯೇ ಎರಡನೇ ವರ್ಷದಲ್ಲಿ ಒಟ್ಟು 2500 ಮೌಲ್ಯದ ರೀಚಾರ್ಜ್ ಮಾಡಿಸಿಕೊಂಡವರಿಗೆ ಮತ್ತೆ ರೂ.1,200 ರೂ ಕ್ಯಾಷ್ ಬ್ಯಾಕ್ ಸಿಗುತ್ತದೆ ಎಂದು ಏರ್ಟೆಲ್ ಹೇಳಿದೆ.

ಕ್ಯಾಷ್ ಬ್ಯಾಕ್ ಪಡೆಯಲು ಅರ್ಹರಾದ ಗ್ರಾಹಕರಿಗೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಖಾತೆಯಲ್ಲಿ ಹಣ ಜಮೆ ಮಾಡುವುದಾಗಿ ತಿಳಿಸಿದೆ. ಇನ್ನು ವೊಡಾಫೋನ್ ಮೊದಲ ವರ್ಷ ರೂ.600 ನೀಡಲಿದ್ದು, ಎರಡನೇ ವರ್ಷ ಮುಗಿದ ನಂತರ ರೂ.900 ಎಂ.ಪೆಸಾ ವ್ಯಾಲೆಟ್ ಮೂಲಕ ಹಣ ಜಮೆ ಮಾಡಲಿದೆಯಂತೆ.

English Summary: Telecom giants Bharti Airtel and Vodafone have joined hands with the leading smartphone maker Samsung to attract smartphone consumers. Both the telecom companies have offered Rs.1,500 cash back offer on selected Samsung’s Galaxy-J series smartphones.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!