ಪಾಕ್ ನಲ್ಲಿ ಭಾರತೀಯ ರಾಯಭಾರಿಯಾಗಿ ಅಜಯ್ ಬಿಸಾರಿಯಾ – News Mirchi

ಪಾಕ್ ನಲ್ಲಿ ಭಾರತೀಯ ರಾಯಭಾರಿಯಾಗಿ ಅಜಯ್ ಬಿಸಾರಿಯಾ

ನವದೆಹಲಿ: ಪಾಕಿಸ್ತಾನದಲ್ಲಿ ಭಾರತದ ಹೈಕಮೀಷನರ್ ಆಗಿ 1987 ಬ್ಯಾಚ್ ಐಎಫ್ ಎಸ್ ಅಧಿಕಾರಿ ಅಜಯ್ ಬಿಸಾರಿಯಾ ನೇಮಕವಾಗಿದ್ದಾರೆ. ಸದ್ಯ ಪೋಲೆಂಡ್ ನಲ್ಲಿ ಭಾರತದ ರಾಯಭಾರಿಯಾಗಿರುವ ಅಜಯ್ ಬಿಸಾರಿಯಾ, ಶೀಘ್ರದಲ್ಲಿಯೇ ಕರ್ತವ್ಯ ಪಾಕ್ ನಲ್ಲಿನ ಭಾರತೀಯ ರಾಯಭಾರಿಯಾಗಿ ಅಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಬುಧವಾರ ರಾತ್ರಿ ಪ್ರಕಟಣೆಯಲ್ಲಿ ತಿಳಿಸಿದೆ.

ಪಾಕ್ ನಲ್ಲಿ ಭಾರತದ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದ ಗೌತಮ್ ಬಾಂಬಾವಲೆ ಅವರು ಇತ್ತೀಚೆಗೆ ಚೀನಾ ರಾಯಭಾರಿಯಾಗಿ ಹೋದ ಹಿನ್ನೆಲೆಯಲ್ಲಿ, ಅಜಯ್ ಪಾಕ್ ನಲ್ಲಿನ ಭಾರತದ ಹೈಕಮೀಷನರ್ ಹುದ್ದೆಯ ಹೊಣೆ ಹೊರಲಿದ್ದಾರೆ. ದೆಹಲಯಲ್ಲಿನ ಫಾರಿನ್ ಸರ್ವೀಸ್ ಇನ್ಸ್’ಟಿಟ್ಯೂಟ್ ನಲ್ಲಿ ವ್ಯಾಸಂಗ ಮಾಡಿದ ನಂತರ ಅಜಯ್ ರಷ್ಯನ್ ಭಾಷೆಯನ್ನು ವಿಶೇಷವಾಗಿ ಆಯ್ಕೆ ಮಾಡಿಕೊಂಡಿದ್ದರು.

Get Latest updates on WhatsApp. Send ‘Add Me’ to 8550851559

Loading...