ಕೇಜ್ರಿವಾಲ್ ಆಗಮನಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್, ಎಸ್ಎಡಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಚಂಡೀಗಡ ವಿಮಾನ ನಿಲ್ದಾಣದ ಬಳಿ ಕಾಂಗ್ರೆಸ್, ಶಿರೋಮಣಿ ಅಕಾಲಿದಳ ಕಾರ್ಯಕರ್ತರು ತಡೆದ ಘಟನೆ ನಡೆದಿದೆ. ಕೇಜ್ರಿವಾಲ್ ಆಗಮನವನ್ನು ವಿರೋಧಿಸಿ ಅವರು ಈ ಸಂದರ್ಭದಲ್ಲಿ ಘೋಷಣೆಗಳನ್ನು ಕೂಗಿದರು. ಡ್ರಗ್ಸ್ ವಿಷಯವನ್ನು ಎಳೆದು ತಂದು ಆಮ್ ಆದ್ಮಿ ಪಕ್ಷ ಪಂಜಾಬ್ ಮಾನ ಹರಾಜು ಹಾಕಿದೆ ಎಂದು ಕಾಂಗ್ರೆಸ್, ಶಿರೋಮಣಿ ಅಕಾಲಿದಳ ಕಾರ್ಯಕರ್ತರು ಆರೋಪಿಸಿದರು. ಈಗ ಸುಖ್ ಪಾಲ್ ಸಿಂಗ್ ಖೈರಾ ರಂತಹ ಆಪ್ ನಾಯಕರೇ ಸ್ಮಗ್ಲಿಂಗ್ ನಲ್ಲಿ ಮುಳುಗಿದ್ದಾರೆ ಎಂದು ಅವರು ಆರೋಪಿಸಿದರು. ಸುಖ್ ಪಾಲ್ ಸಿಂಗ್ ಅವರನ್ನು ಕೂಡಲೇ ಪಕ್ಷದಿಂದ ಬಹಿಷ್ಕರಿಸಬೇಕು ಎಂದು ಅವರು ಒತ್ತಾಯಿಸಿದರು.

ದೇಶದ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ಸಮಸ್ಯೆ ಹೆಚ್ಚಾಗಿರುವುದರಿಂದ, ನೆರೆಯ ರಾಜ್ಯಗಳೊಂದಿಗೆ ಚರ್ಚೆ ನಡೆಸುತ್ತಿರುವ ಕೇಜ್ರಿವಾಲ್, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಅವರನ್ನು ಭೇಟಿಯಾಗಲು ಬುಧವಾರ ಚಂಡೀಗಡ ತಲುಪಿದರು. ಕೇಜ್ರಿವಾಲ್ ಅವರ ಜೊತೆ ದೆಹಲಿ ಪರಿಸರ ಸಚಿವ, ಕಾರ್ಯದರ್ಶಿಗಳು ಕೂಡಾ ಆಗಮಿಸಿದ್ದಾರೆ.

Get Latest updates on WhatsApp. Send ‘Add Me’ to 8550851559