ಅಖಿಲೇಶ್ ವಿರುದ್ಧ ಮುಲಾಯಂ ವಾಗ್ದಾಳಿ

ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಸೋಲುಂಡ ನಂತರ ಇದೇ ಮೊದಲ ಬಾರಿಗೆ ಪುತ್ರ ಅಖಿಲೇಶ್ ಯಾದವ್ ಅವರನ್ನು ಮುಲಾಯಂ ಸಿಂಗ್ ಯಾದವ್ ಬಹಿರಂಗವಾಗಿ ದೂರಿದ್ದಾರೆ.

ನನ್ನ ಮಗ ಅಖಿಲೇಶ್ ನನ್ನು ಮುಖ್ಯಮಂತ್ರಿ ಮಾಡಿದೆ, ಆದರೆ ನನ್ನ ಜೀವನದಲ್ಲಿ ಎಂದೂ ಕಾಣದಂತ ಅವಮಾನವನ್ನು ಅಖಿಲೇಶ್ ಮುಖ್ಯಮಂತ್ರಿಯಾಗಿದ್ದ 5 ವರ್ಷಗಳಲ್ಲಿ ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ. 5 ವರ್ಷಗಳಲ್ಲಿ ನನ್ನನ್ನು ಅವಮಾನಿಸುತ್ತಲೇ ಇದ್ದ ಅಖಿಲೇಶ್, ನನ್ನ ಜೊತೆ ಮಾತನಾಡಿದ್ದು ಕೇವಲ 5 ನಿಮಿಷ ಎಂದು ಆರೋಪಿಸಿದ್ದಾರೆ.

ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ತಂದೆ ಮುಲಾಯಂ ವಿರುದ್ಧ ಆಕ್ರಮಣಕಾರಿ ನಿಲುವು ತಳೆದ ಅಖಿಲೇಶ್ ಯಾದವ್, ತಂದೆ ಮುಲಾಯಂ ಮತ್ತವರ ಸಹೋದರ ಶಿವಪಾಲ್ ಯಾದವ್ ರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿ ಇಡೀ ಪಕ್ಷವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದರು. ತಂದೆಯ ಇಚ್ಛೆಗೆ ವಿರುದ್ಧವಾಗಿ ಕಾಂಗ್ರೆಸ್‌ ನೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು 403 ಸದಸ್ಯ ಬಲದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 47 ಸ್ಥಾನ ಗೆದ್ದು ಕಳಪೆ ಪ್ರದರ್ಶನ ತೋರಿದ್ದರು.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache