ಮುಸ್ಲಿಂ ಮತಗಳಿಗಾಗಿ ಅಖಿಲೇಶ್ ರಣತಂತ್ರ – News Mirchi

ಮುಸ್ಲಿಂ ಮತಗಳಿಗಾಗಿ ಅಖಿಲೇಶ್ ರಣತಂತ್ರ

ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ತಮ್ಮದೇ ರಣತಂತ್ರದೊಂದಿಗೆ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ. ಬಿಜೆಪಿಯನ್ನೇ ಗುರಿಯಾಗಿಸಿಕೊಂಡು ಸಮಾಜವಾದಿ ಪಕ್ಷ- ಕಾಂಗ್ರೆಸ್ ಮತ್ತು ಆರ್‌ಎಲ್‌ಡಿ ಮಹಾಮೈತ್ರಿಕೂಟವನ್ನು ರಚಿಸುವುದು ಅಖಿಲೇಶ್ ಚಿಂತನೆ. ಈ ಮೂಲಕ ಮುಸ್ಲಿಮರ ಮತಗಳು ಹರಿದು ಹಂಚಿಹೋಗದಂತೆ ತಡೆಯಬಹುದು ಎಂಬುದು ಅವರ ವಿಶ್ವಾಸ.

ಯುಪಿ ಜನಸಂಖ್ಯೆಯಲ್ಲಿ ಶೇ.19 ರಷ್ಟಿರುವ ಮುಸ್ಲಿಮರು ಸಮಾಜವಾದಿ ಪಕ್ಷಕ್ಕೆ ಸಾಂಪ್ರದಾಯಿಕ ಓಟು ಬ್ಯಾಂಕ್. 2012 ರಲ್ಲಿ ಶೇ.11.65 ಮತ(28 ಸ್ಥಾನ) ಗಳಿಸಿದ ಕಾಂಗ್ರೆಸ್, 2014 ರ ಲೋಕಸಭಾ ಚುನಾವಣೆಯಲ್ಲಿ ಶೇ.7.5 ರಷ್ಟು ಮತ ಗಳಿಸಿತು. ಕಾಂಗ್ರೆಸ್ ಗೆ ಪ್ರತಿ ಕ್ಷೇತ್ರದಲ್ಲಿ ಬರುತ್ತಿರುವ ಸುಮಾರು 5 ಸಾವಿರ ಮತಗಳು ಎಸ್‌ಪಿ ಗೆ ವರ್ಗಾವಣೆಯಾದರೆ ಗೆಲ್ಲುವ ಅವಕಾಶಗಳು ಹೆಚ್ಚು ಎಂದು ಅಖಿಲೇಶ್ ಅಂದಾಜು.

ಕಾಂಗ್ರೆಸ್ ಗೆ 2012 ರಲ್ಲಿ ಶೇ.18%, 2014 ರಲ್ಲಿ ಶೇ.11 ಮುಸ್ಲಿಂ ಮತಗಳು ಬಂದಿವೆ. ಎಸ್ಪಿಗೆ 2012 ರಲ್ಲಿ 39%, 2014 ರಲ್ಲಿ 58% ಮುಸ್ಲಿಂ ಮತಗಳು ಹರಿದುಬಂದಿದ್ದವು. ಕಾಂಗ್ರೆಸ್ ಮೈತ್ರಿಯಿಂದ ಮುಸ್ಲಿಮರ ಮತಗಳೂ ಸಿಗುತ್ತವೆ ಎಂದು ಅಖಿಲೇಶ್ ಲೆಕ್ಕಾಚಾರ. ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಎಸ್ಪಿ ಕಾಣಿಸಿದರೆ ಮುಸ್ಲಿಮರು ಮಾಯಾವತಿಯ ಬಿಎಸ್ಪಿ ಕಡೆ ಹೋಗುವುದಿಲ್ಲ ಎಂಬ ಲೆಕ್ಕಾಚಾರ.

ಇನ್ನು ರಾಜ್ಯದಲ್ಲಿ ಶೇ. 1.7 ರಷ್ಟು ಜಾಟ್ ಸಮುದಾಯದ ಜನರಿದ್ದಾರೆ. ಆರ್‌ಎಲ್‌ಡಿ ಜಾಟ್ ಸಮುದಾಯದ ಪಕ್ಷವೆಂಬಂತೆ ಬಿಂಬಿತವಾಗಿದೆ. ಆರ್‌ಎಲ್‌ಡಿ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳಲು ಅಖಿಲೇಶ್ ಪ್ರಯತ್ನಿಸುತ್ತಿದ್ದಾರೆ. 2012 ರಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡು 46 ಕಡೆ ಸ್ಪರ್ಧಿಸಿದ್ದ ಆರ್‌ಎಲ್‌ಡಿ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಯುಪಿಯಲ್ಲಿ 50 ಕ್ಷೇತ್ರಗಳಲ್ಲಿ ಜಾಟರ ಪ್ರಭಾವ ಬೀರಲಿದ್ದು, ಆ ಪಕ್ಷದ ನಾಯಕ ಅಜಿತ್ ಸಿಂಗ್ ಪುತ್ರ ಜಯಂತ್ ರನ್ನು ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ.

Loading...

Leave a Reply

Your email address will not be published.