ಹುತಾತ್ಮ ಯೋಧನ ಪತ್ನಿ ಹೆಸರಲ್ಲಿ ಬೇರೊಬ್ಬರಿಗೆ ಸನ್ಮಾನ, ಹೊಸ ವಿವಾದದಲ್ಲಿ ಅಖಿಲೇಶ್ – News Mirchi

ಹುತಾತ್ಮ ಯೋಧನ ಪತ್ನಿ ಹೆಸರಲ್ಲಿ ಬೇರೊಬ್ಬರಿಗೆ ಸನ್ಮಾನ, ಹೊಸ ವಿವಾದದಲ್ಲಿ ಅಖಿಲೇಶ್

ಸಮಾಜವಾದಿ ಪಕ್ಷದ ಮುಖಂಡ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೊಸ ವಿವಾದದಲ್ಲಿ ಸಿಲುಕಿದ್ದರೆ. ಹುತಾತ್ಮ ಯೋಧನ ಕುಟುಂಬವನ್ನು ಅವಮಾನಿಸಿದ್ದಾರೆ ಎಂದು ತೀವ್ರ ಟೀಕೆಗಳು ಕೇಳಿಬರುತ್ತಿವೆ. ಹುತಾತ್ಮ ಯೋಧನ ಪತ್ನಿಯ ಹೆಸರಿನಲ್ಲಿ ಮತ್ತೊಬ್ಬ ಮಹಿಳೆಗೆ ಸನ್ಮಾನ ಮಾಡಿರುವುದೇ ಈ ವಿವಾದಕ್ಕೆ ಕಾರಣ.

1965 ಇಂಡೋ-ಪಾಕ್ ಯುದ್ಧದಲ್ಲಿ ಯೋಧ ಅಬ್ದುಲ್ ಹಮೀದ್ ಹುತಾತ್ಮರಾಗಿದ್ದರು. ಅವರಿಗೆ ಕೇಂದ್ರ ಸರ್ಕಾರ ಪರಮವೀರ ಚಕ್ರ ಪ್ರಶಸ್ತಿಯನ್ನೂ ಪ್ರಕಟಿಸಿತ್ತು. ಇದೀಗ ಮೂರು ದಿನಗಳ ಹಿಂದೆ ಅಜಂಘಡ ಜಿಲ್ಲೆಯ ನಾಥ್ಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಮೀದ್ ಪತ್ನಿ ರಸೂಲನ್ ಬೀಬೀ ಯವರನ್ನು ಅಖಿಲೇಶ್ ಯಾದವ್ ಸನ್ಮಾನಿಸಿದರು. ಆದರೆ ಈ ಸುದ್ದಿ ಟಿವಿಯಲ್ಲಿ ನೋಡಿದ ಅಸಲಿ ಪತ್ನಿ ರಸೂಲನ್ ಗೆ ಮಾತ್ರ ಶಾಕ್. ಕಾರಣ ಅಸಲಿಗೆ ಸನ್ಮಾನ ಸ್ವೀಕರಿಸಿದ ಮಹಿಳೆ ಬೇರೆ ಯಾರೋ ಆಗಿದ್ದರು. ದಿನಪೂರ್ತಿ ತಾನು ಮನೆಯಲ್ಲಿದ್ದರೂ ಅದು ಹೇಗೆ ತಾನು ಅಲ್ಲಿ ಸನ್ಮಾನ ಸ್ವೀಕರಿಸಲು ಸಾಧ್ಯ ಎಂದು 90 ವರ್ಷದ ರಸೂಲನ್ ಹೇಳಿದ್ದಾರೆ. ತನಗೆ ಕಾರ್ಯಕ್ರಮಕ್ಕೆ ಆಹ್ವಾನವೂ ಬಂದಿರಲಿಲ್ಲ, ತಾನು ಸನ್ಮಾನವನ್ನೂ ಸ್ವೀಕರಿಸಿಲ್ಲ ಎಂದು ಆಕೆ ಹೇಳಿದ್ದಾರೆ. ಇದೇ ವಿಯಷವನ್ನು ಆಕೆಯ ಮೊಮ್ಮಗನೂ ದೃಢಪಡಿಸಿದ್ದಾರೆ.

ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಅಖಿಲೇಶ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಿದೆ. ದೇಶಕ್ಕಾಗಿ ಜೀವ ತ್ಯಾಗ ಮಾಡಿದ ಒಬ್ಬ ಯೋಧನ ಕುಟುಂಬಕ್ಕೆ ಆದ ಘೋರ ಅವಮಾನ ಇದು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥನ ವಿರುದ್ಧ ಕಿಡಿ ಕಾರಿದೆ. ಅಷ್ಟೇ ಅಲ್ಲದೆ ಸೆಪ್ಟೆಂಬರ್ 10 ರಂದು ತಾವು ರಸೂಲ್ ಅವರನ್ನು ಸನ್ಮಾನಿಸುತ್ತಿರುವುದಾಗಿ ಬಿಜೆಪಿ ಪ್ರಕಟಿಸಿದೆ.

Loading...