Warning: preg_match(): Compilation failed: range out of order in character class at offset 33 in /home1/newsmg7m/public_html/wp-content/plugins/json-api/singletons/api.php on line 294
ಹುತಾತ್ಮ ಯೋಧರ ಕುಟುಂಬಗಳಿಗೆ ನೆರವು, ಮೋದಿ ಸರ್ಕಾರದ ಜೊತೆ ಕೈಜೋಡಿಸಿದ ಅಕ್ಷಯ್ – News Mirchi

ಹುತಾತ್ಮ ಯೋಧರ ಕುಟುಂಬಗಳಿಗೆ ನೆರವು, ಮೋದಿ ಸರ್ಕಾರದ ಜೊತೆ ಕೈಜೋಡಿಸಿದ ಅಕ್ಷಯ್

ಹುತಾತ್ಮ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು, ಜನರನ್ನು ಪ್ರೋತ್ಸಾಹಿಸುವ ಕೆಲಸದಲ್ಲಿ ನರೇಂದ್ರ ಮೋದಿ ಸರ್ಕಾರದ ಜೊತೆ ಕೈ ಜೋಡಿಸಲು ಬಾಲಿವುಡ್  ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಸಿದ್ಧರಾಗಿದ್ದಾರೆ. ಹಲವು ನಾಗರಿಕರು ಹುತಾತ್ಮ ಯೋಧರ ಕುಟುಂಬಗಳಿಗೆ ನೆರವು ನೀಡಲು ಬಯಸುತ್ತಿದ್ದಾರೆ, ಅದರೆ ತಮ್ಮ ಕೈಲಾದ ಸಹಾಯ ಮಾಡುವುದು ಹೇಗೆ, ಯಾರನ್ನು ಸಂಪರ್ಕಿಸಬೇಕು ಎಂಬುದು ಹಲವರಿಗೆ ಅರಿವಿಲ್ಲ. ಇಂತಹವರ ಗೊಂದಲಗಳನ್ನು ಬಗೆಹರಿಸಲು ಸರ್ಕಾರ ಸರ್ಕಾರ ಅಕ್ಷಯ್ ಕುಮಾರ್ ರವರನ್ನು ಅಯ್ಕೆ ಮಾಡಿಕೊಂಡಿದೆ. ಸಾರ್ವಜನಿಕರಿಂದ ಸ್ವೀಕರಿಸಿದ ಅರ್ಥಿಕ ನೆರವನ್ನು ದೇಶಕ್ಕಾಗಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನೀಡಲಾಗುತ್ತದೆ.

ಕೇಂದ್ರ ಗೃಹಸಚಿವಾಲಯ ನಟ ಅಕ್ಷಯ್ ಕುಮಾರ್ ರವರ ಪಾಲುದಾರಿಕೆಯೊಂದಿಗೆ ಒಂದು ವೆಬ್ ಅಪ್ಲಿಕೇಷನ್ ಒಂದನ್ನು ಸಿದ್ಧಪಡಿಸಲಿದೆ. ಜನರು ನೇರವಾಗಿ ಹುತಾತ್ಮ ಯೋಧರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ಈ ಅಪ್ಲಿಕೇಷನ್ ನೆರವಾಗುತ್ತದೆ. ಈ ಕುರಿತು ನಟ ಅಕ್ಷಯ್ ಕುಮಾರ್ ಪ್ರಚಾರ ನಡೆಸಲಿದ್ದಾರೆ.

ಕೇಂದ್ರ ಭದ್ರತಾ ಪಡೆಯ ಸಿಬ್ಬಂದಿ ಕರ್ತವ್ಯನಿರತರಾಗಿದ್ದ ವೇಳೆ ಸಾವನ್ನಪ್ಪಿದರೆ, ಕೂಡಲೇ ಅಂತಹವರ ಕುಟುಂಬ ಸದಸ್ಯರ ಆರ್ಥಿಕ ಪರಿಸ್ಥಿತಿ, ಯೋಧನ ಮೇಲೆ ಅವಲಂಬಿತರಾಗಿದ್ದ ಕುಟುಂಬ ಸದಸ್ಯರ ಸಂಖ್ಯೆ ಮತ್ತು ಅವರ ಬ್ಯಾಂಕ್ ಖಾತೆ ಮುಂತಾದ ವಿಷಯಗಳನ್ನು ಗೃಹಸಚಿವಾಲಯದ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಒಮ್ಮೆ ರೂ.15 ಲಕ್ಷದ ನೆರವು ತಲುಪಿದ ಕೂಡಲೇ ಅಂತಹ ಯೋಧರ ಕುಟುಂಬದ ಖಾತೆಯ ವಿವರಗಳನ್ನು ವೆಬ್ಸೈಟಿನಿಂದ ತೆಗೆಯಲಾಗುತ್ತದೆ.

English Summary: The Home Ministry in partnership with the Bollywood star is planning to create a simple app. The financial aid received from citizens of India will be given to kin of martyred jawans who sacrificed their lives for the nation.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!