103 ಹುತಾತ್ಮರ ಕುಟುಂಬಗಳಿಗೆ ಅಕ್ಷಯ್ ಕುಮಾರ್ ದೀಪಾವಳಿ ಗಿಫ್ಟ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ಉತ್ತಮ ನಟ ಮಾತ್ರವಲ್ಲದೆ, ಜನರ ನೋವಿಗೆ ಶೀಘ್ರವಾಗಿ ಸ್ಪಂದಿಸುವ ವ್ಯಕ್ತಿ ಎಂದು ಹಲವು ಬಾರಿ ಸಾಬೀತಾಗಿದೆ. ಇದೀಗ ದೀಪಾವಳಿ ಅಂಗವಾಗಿ ದೇಶಕ್ಕಾಗಿ ತಮ್ಮ ಹುತಾತ್ಮರಾದ 103 ಯೋಧರ ಕುಟುಂಬಗಳಿಗೆ ಉಡುಗೊರೆ ನೀಡಿದ್ದಾರೆ.

ಮಹಾರಾಷ್ಟ್ರದ ಕೊಲ್ಹಾಪುರ ವ್ಯಾಪ್ತಿಯ 103 ಹುತಾತ್ಮ ಯೋಧರ ಕುಟುಂಬಗಳಿಗೆ ದೀಪಾವಳಿ ಆಚರಿಸಲು ಚೆಕ್ ಜತೆಗೆ ವಿಶೇಷ ಸಂದೇಶವನ್ನು ಕಳುಹಿಸಿದ್ದಾರೆ. ಕರ್ತವ್ಯ ನಿರ್ವಹಿಸುತ್ತಾ ಹುತಾತ್ಮರಾದ ಪೊಲೀಸರು, ಅರೆಸೇನಾ ಪಡೆಯ, ಸೈನಿಕರ ಮಾಹಿತಿಗಳನ್ನು ಕೊಲ್ಹಾಪುರ ಅಧಿಕಾರಿಗಳನ್ನು ಭೇಟಿ ಮಾಡಿ ಅಕ್ಷಯ್ ಕುಮಾರ್ ತಿಳಿದುಕೊಂಡಿದ್ದರು.

[ಇದನ್ನೂ ಓದಿ: ಹಾರ್ಧಿಕ್ ಹಾರಾಟಕ್ಕೆ ಬ್ರೇಕ್ ಹಾಕಿದ ಮೋದಿ?]

ಸುಮಾರು 103 ಹುತಾತ್ಮ ಕುಟುಂಬಗಳನ್ನು ಸ್ವತಃ ಆಯ್ಕೆ ಮಾಡಿದ ಅಕ್ಷಯ್ ಕುಮಾರ್, ಪ್ರತಿ ಕುಟುಂಬಕ್ಕೂ ರೂ.25 ಸಾವಿರದ ಚೆಕ್ ಕಳುಹಿಸಿದ್ದಾರೆ. ಚೆಕ್ ನೊಂದಿಗೆ ಒಂದು ಸಂದೇಶವಿರುವ ಪತ್ರವನ್ನು ಕಳುಹಿಸಿದ್ದಾರೆ. ಮಕ್ಕಳಿಗೆ ಪುಸ್ತಕಗಳು ಮತ್ತು ಸಿಹಿಯನ್ನೂ ಆ ಕುಟುಂಬಗಳಿಗೆ ತಲುಪಿಸಿದ್ದಾರೆ.

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರ ಕುಟುಂಬ ಸದಸ್ಯರಾದ ನಿಮ್ಮನ್ನು ನೋಡುತ್ತಿದ್ದರೆ ನನಗೆ ಹೆಮ್ಮೆಯೆನಿಸುತ್ತಿದೆ. ಈ ದೀಪಾವಳಿ ಹಬ್ಬದಂದು ನಿಮ್ಮ ಪ್ರೀತಿಪಾತ್ರರೊಂದಿಗೆ ಆಚರಿಸಲುನ ನಿಮಗೆ ಸಾಧ್ಯವಾಗುತ್ತಿಲ್ಲವೆಂದು ನನಗೆ ಗೊತ್ತು. ಆದರೆ ನೀವು ಧೈರ್ಯದಿಂದ ಹೊಸ ಜೀವನವನ್ನು ಆರಂಭಿಸಬೇಕು ಎಂದು ನಾನು ಬಯಸುತ್ತಿದ್ದೇನೆ. ನಿಮಗಾಗಿ ಸಿಹಿ, ಮಕ್ಕಳಿಗಾಗಿ ಪುಸ್ತಕಗಳನ್ನು ಕಳುಹಿಸುತ್ತಿದ್ದೇನೆ, ಪ್ರೀತಿಯಿಂದ ಸ್ವೀಕರಿಸಿ ಎಂದು ಪತ್ರದಲ್ಲಿ ಅಕ್ಷಯ್ ಬರೆದಿದ್ದಾರೆ.

Get Latest updates on WhatsApp. Send ‘Add Me’ to 8550851559