ಸಂಸತ್ ಕಲಾಪ: ಸ್ಪೀಕರ್ ಮೇಲೆ ಪೇಪರ್ ಹರಿದೆಸೆದ ಸಂಸದ

ನವದೆಹಲಿ: ಗುರುವಾರ ಸಂಸತ್ ಅಧಿವೇಶನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ನೋಟು ರದ್ದು ಕ್ರಮ ಕುರಿತಂತೆ ಗದ್ದಲ ಆರಂಭಿಸಿದರು. ಕೆಲ ನಿಮಿಷಗಳಲ್ಲೇ ಉಭಯ ಸಭೆಗಳನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಯಿತು.

ಲೋಕಸಭೆಯಲ್ಲಿ ಸಮಾಜವಾದಿ ಪಕ್ಷದ ಸಂಸದ ಅಕ್ಷಯ್ ಯಾದವ್ ಕಾಗದ ಹರಿದು ಸ್ಪೀಕರ್ ಸುಮತ್ರಾ ಮಹಾಜನ್ ಮೇಲೆ ಎಸೆದಿದ್ದು ಮತ್ತಷ್ಟು ಗದ್ದಲಕ್ಕೆ ಕಾರಣವಾಯಿತು. ಆಡಳಿತ ಪಕ್ಷಗಳು ಮತ್ತು ವಿರೋಧ ಪಕ್ಷಗಳ ಘೋಷಣೆಗಳಿಂದ ಸಭೆ ಗೊಂದಲದ ಗೂಡಾಯಿತು. ಪುನಃ ಸಭೆ ಸೇರಿದ ನಂತರವೂ ಪರಿಸ್ಥಿತಿ ಸುಧಾರಿಸಲಿಲ್ಲ. ಹೀಗಾಗಿ ಸ್ಪೀಕರ್ ಕಲಾಪವನ್ನು ನಾಳೆಗೆ ಮುಂದೂಡಿದರು.

ಇನ್ನು ಸ್ಪೀಕರ್ ಮೇಲೆ ಕಾಗದ ಹರಿದು ಎಸೆದ ಅಕ್ಷಯ್ ಯಾದವ್ ವರ್ತನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಚರ್ಚಿಸಲು ಸ್ಪೀಕರ್ ಸುಮಿತ್ರಾ ಮಹಾಜನ್ ರವರನ್ನು ಕೇಂದ್ರ ಸಚಿವರಾದ ವೆಂಕಯ್ಯನಾಯ್ಡು, ಅನಂತಕುಮಾರ್ ಭೇಟಿ ಮಾಡಿದರು. ಅತ್ತ ರಾಜ್ಯ ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಚರ್ಚೆ ಆರಂಭಿಸಿದರು.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache