ಅದ್ಧೂರಿಯಾಗಿ ನಡೆದ ಆಲಂಬಗಿರಿಯ ಗುರುಮೂರ್ತೆಶ್ವರಸ್ವಾಮಿ ಬ್ರಹ್ಮರಥೋತ್ಸವ

ಚಿಂತಾಮಣಿ, ಫೆ.14: ತಾಲ್ಲೂಕಿನ ಮುನಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಬಗಿರಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಗುರುಮೂರ್ತೆಶ್ವರ ಸ್ವಾಮಿಯವರ ಬ್ರಹ್ಮರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮ, ಸಡಗರದಿಂದ ನೆರವೇರಿತು.

ಪ್ರತಿ ವರ್ಷ ಶಿವರಾತ್ರಿ ಹಬ್ಬದ ಮಾರನೆಯ ದಿನ ಇಲ್ಲಿ ಶ್ರೀ ಗುರುಮೂರ್ತೆಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವವು ನಡೆಯುತ್ತದೆ. ರಥೋತ್ಸವದ ಹಿನ್ನಲೆಯಲ್ಲಿ ಬೆಳಿಗ್ಗೆಯಿಂದಲೇ ಶ್ರೀ ಗುರುಮೂರ್ತೆಶ್ವರ ಸ್ವಾಮಿ ರವರಿಗೆ ವಿಶೇಷ ಹೂವಿನ ಅಲಂಕಾರ, ಅಭಿಷೇಕ, ಹೋಮ, ಹವನ ಸೇರಿದಂತೆ ಧಾರ್ಮಿಕ ಕಾರ್ಯ ಕೈಂಕರ್ಯಗಳು ನಡೆದವು.

ಮಧ್ಯಾಹ್ನ ಎರಡು ಗಂಟೆಗೆ ಗುರುಮೂರ್ತೆಶ್ವರ ಸ್ವಾಮಿ ಟ್ರಸ್ಟನವರು ರಥೋತ್ಸವವಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬ್ರಹ್ಮರಥೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

ಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ನಟನೆಯ ಹಾಡಿನ ವಿರುದ್ಧ ದೂರು

ಇನ್ನು ವಿಶೇಷವಾಗಿ ಚಿಂತಾಮಣಿ ಹಾಗೂ ಆಲಂಬಗಿರಿ ಸುತ್ತಮುತ್ತಲಿನ ಸಾವಿರಾರು ಭಕ್ತರು ಬೆಳಗ್ಗೆಯಿಂದಲೇ ದೇವರ ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರಥೋತ್ಸವದ ಸಂಭ್ರಮ ಸವಿದರು. ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಅನ್ನ ದಾಸೋಹ ಹಾಗೂ ಪಾನಕ ಹೆಸರುಬೇಳೆ ವಿತರಣೆ ಮಾಡಲಾಯಿತು. ರಥೋತ್ಸವದಲ್ಲಿ ಡೊಳ್ಳು ಕುಣಿತ, ವೀರ ಗಾಸೆ ನೃತ್ಯ, ಮತ್ತು ಕೋಲಾಟ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

Get Latest updates on WhatsApp. Send ‘Subscribe’ to 8550851559