ಒಂದೆರಡು ದಿನ ಕಾಯಿರಿ, ಆ ನೋಟುಗಳೆಲ್ಲಾ ಬರುತ್ತಿವೆ

ನೋಟು ಬದಲಾವಣೆಗಾಗಿ ಪರದಾಡುತ್ತಿರುವ ಜನರಿಗೆ ಶುಭ ಸುದ್ದಿ. ಶೀಘ್ರದಲ್ಲೇ ಅವರ ಕಷ್ಟಗಳು ಕೊನೆಯಾಗಲಿವೆ. ನಾಸಿಕ್ ನ ಕರೆನ್ಸಿ ನೋಟು ಪ್ರಿಂಟಿಂಗ್ ಪ್ರೆಸ್ ಹೊಸ ರೂ. 500 ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ‌ಗೆ ಕಳುಹಿಸಲು ಆರಂಭಿಸಿದೆ. ಮೊದಲ ಹಂತದಲ್ಲಿ 50 ಲಕ್ಷ ನೋಟುಗಳನ್ನು(ಇದರ ಮೌಲ್ಯ ರೂ.250 ಕೋಟಿ) ಬುಧವಾರದ ವೇಳೆಗೆ ಕಳುಹಿಸುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಅಷ್ಟೇ ಅಲ್ಲದೆ ರೂ. 20, 50, 100 ರೂ ಮೌಲ್ಯದ ನೋಟುಗಳನ್ನೂ ಭಾರೀ ಪ್ರಮಾಣದಲ್ಲಿ ಮುದ್ರಿಸುತ್ತಿರುವುದಾಗಿ ಹೇಳಿದ್ದಾರೆ.

ದೇಶಾದ್ಯಂತ ಸೆಕ್ಯೂರಿಟಿ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಗೆ ಸೇರಿದ 9 ಮುದ್ರಣಾಲಯಗಳು ಇವೆ. ಇವುಗಳಲ್ಲಿ ಕರೆನ್ಸಿ ನೋಟು, ನಾಣ್ಯಗಳು ತಯಾರಾಗುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಹೇಳುವಂತೆ, ಕರ್ನಾಟಕದ ಮೈಸೂರು, ಪಶ್ಚಿಮ ಬಂಗಾಳದ ಸಲ್ಬೋನಿ ಪ್ರಿಂಟಿಂಗ್ ಪ್ರೆಸ್ ಗಳಲ್ಲಿ ರೂ.2000, 500 ಮುಖಬೆಲೆಯ ನೋಟು ಮುದ್ರಣವಾಗಿದೆ. ರೂ. 500 ಮುಖ ಬೆಲೆಯ ನೋಟುಗಳನ್ನು ನಾಸಿಕ್, ಮಧ್ಯಪ್ರದೇಶದ ದೇವಾಸ್ ನಲ್ಲಿ ಮುದ್ರಿಸುತ್ತಿದ್ದಾರೆ. ಸದ್ಯದ ಈ ಹಣಕಾಸು ವರ್ಷ ಮುಗಿಯುವುದರೊಳಗೆ 40 ಕೋಟಿ ರೂ. 500ರ ನೋಟುಗಳನ್ನು ಮುದ್ರಿಸುವ ಗುರಿಯನ್ನು ಹೊಂದಲಾಗಿದೆ.

Loading...

Leave a Reply

Your email address will not be published.

error: Content is protected !!