ಬೆರಳಚ್ಚು ನೀಡಿ ವಿಮಾನ ಹತ್ತಿ, ಗುರುತಿನ ಚೀಟಿಗಳ ಗೊಡವೆಯಿಲ್ಲ

ವಿಮಾನ ನಿಲ್ದಾಣಕ್ಕೆ ಹೋಗಲು ನಿಮ್ಮ ವೈಯುಕ್ತಿಕ ಗುರುತಿನ ಚೀಟಿ, ಇತರೆ ದಾಖಲೆಗಳು ಇಲ್ಲಿಯವರೆಗು ಹೊತ್ತೊಯ್ಯುತ್ತಿದ್ದೀರಿ ಅಲ್ಲವೇ? ಇದೆಲ್ಲದರ ರಗಳೆಯಿಲ್ಲದೆ ಕೇವಲ ನಿಮ್ಮ ಬೆರಳಚ್ಚು ನೀಡಿದರೆ ಹೇಗೆ? ಆಶ್ಚರ್ಯಗೊಳ್ಳಬೆಡಿ, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ದೇಶೀಯ ವಿಮಾನಗಳಲ್ಲಿ ಪ್ರಯಾಣಿಸಲು ನಿಮ್ಮ ಬೆರಳಚ್ಚು ನೀಡಿದರೆ ಸಾಕು ಎನ್ನುತ್ತಿದೆ ನಾಗರಿಕ ವಿಮಾನಯಾನ ಸಚಿವಾಲಯ.

ಇಲ್ಲಿವರೆಗೂ ದೇಶದಲ್ಲಿ 100 ಕೋಟಿ ಜನರಿಗೆ ಆಧಾರ್ ಕಾರ್ಡ್ ನೀಡಲಾಗಿದಡ. ಆ ಕಾರ್ಡ್ ನೀಡುವಾಗ ಎಲ್ಲಾ ಕೈಬೆರಳುಗಳು, ಐರಿಸ್ ಸ್ಕ್ಯಾನ್ ಮಾಡಿ ಅವುಗಳನ್ನು ಡಿಜಿಟಲ್ ರಿಜಿಸ್ಟ್ರಿಯಲ್ಲಿ ಫೀಡ್ ಮಾಡಲಾಗಿದೆ ಎಂದು ವಿಮಾನಯಾನ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈಗ ವಿಮಾನ ನಿಲ್ದಾಣದ ಟರ್ಮಿನಲ್ ಬಳಿ ಹೋಗಬೇಕೆಂದರೆ ತಮ್ಮ ಟಿಕೆಟ್ ನೊಂದಿಗೆ ಗುರುತಿನ ಚೀಟಿಯನ್ನೂ ತೋರಿಸಬೇಕಿದೆ. ಆದರೆ ಇನ್ನು ಮುಂದೆ ಟಿಕೆಟ್ ಬುಕ್ ಮಾಡುವ ಸಮಯದಲ್ಲೇ ಆಧಾರ್ ಸಂಖ್ಯೆ ಕೇಳುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬೆರಳು ಒತ್ತಿದರೆ ಸಾಕು, ಆಧಾರ್ ವಿವರಗಳು ತಿಳಿಯುತ್ತವೆ, ಟಿಕೆಟ್ ಮೇಲಿರುವ ವಿವರಗಳಿಗೆ ಅದು ಹೋಲಿಕೆಯಾದರೆ ಸಾಕು, ಟರ್ಮಿನಲ್ ಬಳಿ ಹೋಗಲು, ದೇಶೀಯ ವಿಮಾನವನ್ನು ಹತ್ತಲು ಅನುಮತಿ ಸಿಗುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

Related News

Comments (wait until it loads)
Loading...
class="clear">