ಆ ಬಿಲ್ ನಕಲಿ, ರಿಲಯನ್ಸ್ ಜಿಯೋ ಸ್ಪಷ್ಟನೆ

ರಿಲಯನ್ಸ್ ಜಿಯೋ ಕಡೆಯಿಂದ ಬಂದಿದೆಯೆನ್ನಲಾದ 27,718 ರೂಪಾಯಿ ಮೊತ್ತದ ಪೋಸ್ಟ್ ಪೇಯ್ಡ್ ಬಿಲ್ ಸಾಮಾಜಿಕ ಜಾಲ ತಾಣಗಳಲ್ಲಿ ಇತ್ತೀಚೆಗೆ ಹರಿದಾಡುತ್ತಿದೆ. ಆದರೆ ಇದು ಫೋಟೋಶಾಪ್ ಮೂಲಕ ಎಡಿಟ್ ಮಾಡಲಾದ ನಕಲಿ ಬಿಲ್ ಎಂದು ರಿಲಯನ್ಸ್ ಮೂಲಗಳು ಸ್ಪಷ್ಟಪಡಿಸಿವೆ.

jio-1ಕೋಲ್ಕತಾದ ಅಯುನುದ್ದೀನ್ ಮೊಂಡಾಲ್ ಎಂಬುವವರಿಗೆ ಬಂದಿದೆಯೆನ್ನಲಾಗುತ್ತಿರುವ ಈ ಬಿಲ್ ನಲ್ಲಿ ನವೆಂಬರ್ 20 ರಂದು ಪಾವತಿಗೆ ಕೊನೆಯ ದಿನಾಂಕ ಎಂದು ನಮೂದಿಸಿದ್ದು, ತಪ್ಪಿದರೆ ರೂ. 1,200 ದಂಡ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.

ಆದರೆ ನಮಗೆಲ್ಲಾ ತಿಳಿದಿರುವಂತೆ ರಿಲಯನ್ಸ್ ಜಿಯೋ ವೆಲ್ಕಮ್ ಆಫರ್ ಅಡಿಯಲ್ಲಿ ಅನ್‌ಲಿಮಿಟೆಡ್ 4ಜಿ ವಾಯ್ಸ್ ಕರೆಗಳು ಉಚಿತವಾಗಿದ್ದು, ಎಲ್ಲಾ ಗ್ರಾಹಕರಿಗೆ ಈ ಕೊಡುಗೆ ಡಿಸೆಂಬರ್ 31 ರವರೆಗೆ ಚಾಲ್ತಿಯಲ್ಲಿರುತ್ತದೆ.

jio-3ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಜಿಯೋ ವೆಲ್ಕಮ್ ಅಫರ್ ಗೆ ಬಂದಿರುವ ಬಿಲ್ ನಕಲಿ ಮತ್ತು ಫೋಟೋಶಾಪ್ ಬಳಸಿ ಸೃಷ್ಟಿಸಲಾಗಿದೆ ಎಂದು ರಿಲಯನ್ಸ್ ವಕ್ತಾರರು ಹೇಳಿದ್ದಾರೆ. ಇಂತಹ ವದಂತಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಗ್ರಾಹಕರಿಗೆ ಅವರು ಮನವಿ ಮಾಡಿದ್ದಾರೆ.