ಪದ್ಮಾವತಿ ನಿಷೇಧ ಬಯಸಿಲ್ಲ, ಬೆದರಿಕೆಗಳನ್ನು ಬೆಂಬಲಿಸುವುದಿಲ್ಲ: ಪಂಜಾಬ್ ಮುಖ್ಯಮಂತ್ರಿ – News Mirchi

ಪದ್ಮಾವತಿ ನಿಷೇಧ ಬಯಸಿಲ್ಲ, ಬೆದರಿಕೆಗಳನ್ನು ಬೆಂಬಲಿಸುವುದಿಲ್ಲ: ಪಂಜಾಬ್ ಮುಖ್ಯಮಂತ್ರಿ

ವಿವಾದಿತ ಪದ್ಮಾವತಿ ಚಿತ್ರಕ್ಕೆ ನಿಷೇಧ ಹೇರುವಂತೆ ಕೋರುವುದಿಲ್ಲ, ಹಾಗೆಯೇ ಚಿತ್ರದ ಕಲಾವಿದರಿಗೆ ಹಾಕುತ್ತಿರುವ ಬೆದರಿಕೆಗಳನ್ನೂ ಬೆಂಬಲಿಸುವುದಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಚಿತ್ರವನ್ನು ಇನ್ನೂ ನೋಡದೆಯೇ ಅದು ಹೇಗೆ ನಾನು ಅದನ್ನು ನಿಷೇಧಿಸುವಂತೆ ಕೋರಲು ಸಾಧ್ಯ ಎಂದು ಸಿಂಗ್ ಪ್ರಶ್ನಿಸಿದ್ದಾರೆ. ಈ ಹಿಂದೆ ವಿವಾದಿತ ಚಿತ್ರದ ಕುರಿತು ಮಾತನಾಡಿದ್ದ ಅಮರಿಂದರ್ ಸಿಂಗ್, ಇತಿಹಾಸವನ್ನು ತಿರುಚುವ ಹಕ್ಕು ಯಾರಿಗೂ ಇಲ್ಲ, ಯಾರ ಭಾವನೆಗಳಿಗೆ ಇದರಿಂದ ನೋವಾಗಿದೆಯೋ ಅವರು ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಹೊಂದಿದ್ದಾರೆ, ಐತಿಹಾಸಿಕ ಸತ್ಯಗಳನ್ನು ತಿರುಚುವ ಹಕ್ಕನ್ನು ಚಲನಚಿತ್ರ ಪರವಾನಗಿ ನೀಡುವುದಿಲ್ಲ ಎಂದು ಹೇಳಿದ್ದರು.

ಡಿಸೆಂಬರ್ 1 ರಂದು ಬಿಡುಗಡೆಯಾಗಬೇಕಿದ್ದ ಚಿತ್ರವನ್ನು ರಜಪೂತ ಸಮುದಾಯದ ತೀವ್ರ ವಿರೋಧಗಳಿಂದಾಗಿ ಚಿತ್ರದ ನಿರ್ಮಾಪಕರು ಮುಂದೂಡಿದ್ದಾರೆ.

 

Get Latest updates on WhatsApp. Send ‘Add Me’ to 8550851559

Loading...