ಉಲ್ಟಾ ಹೊಡೆದ ಗ್ರೀನ್ ಟ್ರಿಬ್ಯುನಲ್, ಧಾರ್ಮಿಕ ಆಚರಣೆಗಳಿಗಿಲ್ಲವಂತೆ ನಿಷೇಧ |News Mirchi

ಉಲ್ಟಾ ಹೊಡೆದ ಗ್ರೀನ್ ಟ್ರಿಬ್ಯುನಲ್, ಧಾರ್ಮಿಕ ಆಚರಣೆಗಳಿಗಿಲ್ಲವಂತೆ ನಿಷೇಧ

ಅಮರನಾಥ ದೇಗುಲವನ್ನು ಸೈಲೆಂಟ್ ಜೋನ್ ಎಂದು ಘೋಷಿಸಿ, ಮಂತ್ರಘೋಷ ಮತ್ತು ಜೈಕಾರಗಳಿಗೆ ನಿಷೇಧ ವಿಧಿಸಿ ಜನರಿಂದ ತೀವ್ರ ಟೀಕೆಗೆ ಒಳಗಾಗಿದ್ದ ರಾಷ್ಟ್ರೀಯ ಹಸಿರು ನ್ಯಾಯಪೀಠ ಇದೀಗ ಅಂತಹ ಉಲ್ಟಾ ಹೊಡೆದಿದೆ. ಅಮರನಾಥ ಗುಹೆಯನ್ನು ನಾವು ನಿಶ್ಯಬ್ದ ವಲಯವನ್ನಾಗಿ ಘೋಷಿಸಿಲ್ಲ ಎಂದು ಹೇಳಿರುವ ಹಸಿರು ನ್ಯಾಯಪೀಠ, ಆರತಿ ಮತ್ತು ಇತರೆ ಧಾರ್ಮಿಕ ಆಚರಣೆಗಳಿಗೆ ನಿರ್ಬಂಧ ಅನ್ವಯವಾಗುವುದಿಲ್ಲವೆಂದು ಹೇಳಿದೆ.

ಅಮರನಾಥ ದೇಗುಲದಲ್ಲಿ ಮಂತ್ರಘೋಷ, ಜೈಕಾರಗಳಿಗೆ ನಿಷೇಧ

ಅಮರನಾಥ ಮಂದಿರದ ಶಿವಲಿಂಗದ ಎದುರು ಮಾತ್ರ ಭಕ್ತರು ನಿಶ್ಯಬ್ದವನ್ನು ಪಾಲಿಸುವಂತೆ ಹೇಳಲಾಗಿದೆಯೇ ಹೊರತು ಇತರೆ ಪ್ರದೇಶಗಳಲ್ಲಿ ಈ ನಿರ್ಬಂಧಗಳು ಅನ್ವಯಿಸುವುದಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಪೀಠದ ಅಧ್ಯಕ್ಷ ನ್ಯಾ. ಸ್ವತಂತ್ರ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಅಮರನಾಥ ಮಂದಿರದಲ್ಲಿ ಮಂತ್ರಘೋಷಗಳು ಮತ್ತು ಜೈಕಾರ ಕೂಗುವುದನ್ನು ಬುಧವಾರ ನಿಷೇಧಿಸಿದ್ದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ಮಂದಿರದಲ್ಲಿ ಗಂಟೆ ಮೊಳಗಿಸುವುದನ್ನೂ ನಿಲ್ಲಿಸುವಂತೆ ಅಮರನಾಥ ದೇಗುಲ ಮಂಡಳಿಗೆ ಸೂಚಿಸಿತ್ತು. ಕೊನೆಯ ಚೆಕ್ ಪೋಸ್ಟ್ ಬಳಿ ಯಾತ್ರಿಕರು ತಮ್ಮ ಮೊಬೈಲ್ ಗಳನ್ನು ನೀಡಿ ಅಲ್ಲಿಂದ ಒಂದೇ ಸಾಲಿನಲ್ಲಿ ನಡೆದು ಬರುವಂತೆ ನೋಡಿಕೊಳ್ಳಲು ಹೇಳಿತ್ತು. ಅದರೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಈ ತೀರ್ಮಾನಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!