ಅಮರನಾಥ ಯಾತ್ರಿಗಳ ಮೇಲೆ ಉಗ್ರರ ದಾಳಿ : 7 ಸಾವು, 19 ಜನರಿಗೆ ಗಾಯ |News Mirchi

ಅಮರನಾಥ ಯಾತ್ರಿಗಳ ಮೇಲೆ ಉಗ್ರರ ದಾಳಿ : 7 ಸಾವು, 19 ಜನರಿಗೆ ಗಾಯ

ದಕ್ಷಿಣ ಕಾಶ್ಮೀರದಲ್ಲಿನ ಜಮ್ಮೂ-ಶ್ರೀನಗರ ಹೆದ್ದಾರಿಯಲ್ಲಿ ಅಮರನಾಥ ಯಾತ್ರಿಗಳಿದ್ದ ಬಸ್ ಮೇಲೆ ಸೋಮವಾರ ಉಗ್ರರು ನಡೆಸಿದ ದಾಳಿಯಲ್ಲಿ 7 ಜನ ಯಾತ್ರಿಗಳು ಸಾವನ್ನಪ್ಪಿದ್ದು, ಪೊಲೀಸರು ಸೇರಿದಂತೆ 19 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಸಾವನ್ನಪ್ಪಿದವರಲ್ಲಿ 5 ಜನ ಗುಜರಾತಿನವರಾದರೆ, ಇಬ್ಬರು ಮಹಾರಾಷ್ಟ್ರದವರು. ಅಮರನಾಥ ದೇವಾಲಯ ಭೇಟಿ ಮುಗಿಸಿ ಯಾತ್ರಿಗಳು ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ಘಟನೆಯ ನಂತರ ಜಮ್ಮೂ ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಅಮರನಾಥ ಯಾತ್ರಿಕರ ಮೇಲಿನ ದಾಳಿ ಹಿನ್ನೆಲೆಯಲ್ಲಿ ಜಮ್ಮುವಿನಲ್ಲಿ ವ್ಯಾಪಾರಿಗಳು ತಮ್ಮ ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದಾರೆ. ಈ ಬಂದ್ ಗೆ ಪ್ರತಿಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಬೆಂಬಲಿಸಿದ್ದು, ಜ್ಯಾತ್ಯಾತೀತ ಚೌಕಟ್ಟನ್ನು ಒಡೆಯಲು ನಡೆಸಿರುವ ದೃಷ್ಕೃತ್ಯ ಇದು ಎಂದು ಹೇಳಿದೆ.

ಸೋಮವಾರ ರಾತ್ರಿ ಸುಮಾರು 8:20 ರ ವೇಳೆಯಲ್ಲಿ ಈ ದಾಳಿ ನಡೆದಿದೆ. ಮೊದಲು ಎರಡು ಪೊಲೀಸ್ಟ್ ಗಳ ಮೇಲೆ ದಾಳಿ ನಡೆಸಿದ ಉಗ್ರರು ನಂತರ ಅಮರನಾಥ ಯಾತ್ರಿಗಳಿದ್ದ ಬಸ್ ಮೇಲೆ ಗುಂಡಿನ ದಾಳಿ ನಡೆಸುತ್ತಾ ಪರಾರಿಯಾಗಿದ್ದಾರೆ.

ಸೇನಾ ಜೀಪಿಗೆ ಕಟ್ಟಲಾಗಿದ್ದ ವ್ಯಕ್ತಿಗೆ 10 ಲಕ್ಷ ಪರಿಹಾರ ಕೊಡಿ: ಜಮ್ಮೂ ಮಾನವ ಹಕ್ಕು ಆಯೋಗ

ಜಮ್ಮೂ ಕಾಶ್ಮೀರದಲ್ಲಿ ಶಾಂತಿಯುತ ಅಮರನಾಥ ಯಾತ್ರಿಗಳ ಮೇಲೆ ನಡೆದ ಕ್ರೂರ ದಾಳಿಯಿಂದ ತುಂಬಾ ನೋವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇಂತಹ ಹೇಡಿತನದ ಮತ್ತು ದುಷ್ಟ ಕೃತ್ಯಗಳಿಂದ ಭಾರತ ಎಂದಿಗೂ ಕುಗ್ಗುವುದಿಲ್ಲ ಎಂದು ಹೇಳಿದ್ದಾರೆ.

ಅಮರನಾಥ ಯಾತ್ರೆಯು ಎಲ್ಲಾ ತೀರ್ಥಯಾತ್ರೆಗಳಷ್ಟು ಸುರಕ್ಷಿತವಲ್ಲ. 2012 ರಲ್ಲಿ ಆರೋಗ್ಯ ಸಮಸ್ಯೆ ಮತ್ತು ರಸ್ತೆ ಅಪಘಾತಗಳಿಂದಾಗಿ 130 ಯಾತ್ರಿಕರು ಮೃತಪಟ್ಟಿದ್ದರು. 1991 ರಿಂದ 1995 ರವರೆಗೂ ಭಯೋತ್ಪಾದಕರ ಬೆದರಿಕೆಗಳಿಂದಾಗಿ ಯಾತ್ರೆ ಅಮಾನತುಗೊಂಡಿತ್ತು. 1996 ರಲ್ಲಿ ಅನಿಯಮಿತ ಹಿಮಪಾತಗಳಿಂದ 242 ಯಾತ್ರಿಗಳು ಸಾವನ್ನಪ್ಪಿದ್ದರು. 2000 ರಲ್ಲಿ ಕಾಶ್ಮೀರಿ ಉಗ್ರಗಾಮಿಗಳು ಪಹಲ್ಗಾಂನಲ್ಲಿ 30 ಜನರನ್ನು ಹತ್ಯೆ ಮಾಡಿದ್ದರು.

ಹೌದು ಚೀನಾ ರಾಯಭಾರಿಯೊಂದಿಗೆ ರಾಹುಲ್ ಭೇಟಿ ನಿಜ, ಮಾತು ಬದಲಿಸಿದ ಕಾಂಗ್ರೆಸ್

Loading...
loading...
error: Content is protected !!