ಉಗ್ರರ ದಾಳಿಯ ನಂತರ ಬಿಗಿ ಭದ್ರತೆಯ ನಡುವೆ ಮುಂದುವರೆದ ಅಮರನಾಥ ಯಾತ್ರೆ

ಶ್ರೀನಗರ: ಅಮರನಾಥ ಯಾತ್ರಿಕರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ವಿರೋಧಿಸಿ ಪ್ರತಿಪಕ್ಷಗಳು ಎರಡು ದಿನಗಳ ಬಂದ್ ಗೆ ಕರೆ ನೀಡಿದ್ದಾರೆ. ಭದ್ರತೆಯ ದೃಷ್ಟಿಯಿಂದ ಎರಡು ದಿನಗಳ ಕಾಲ ಶಾಲಾ ಕಾಲೇಜುಗಳನ್ನು ಮುಚ್ಚಲಾಗುತ್ತದೆ. ಆದರೆ ಅಮರನಾಥ ಯಾತ್ರೆ ಮುಂದುವರೆಯುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಜಮ್ಮುವಿನಿಂದ ಹಲವು ಯಾತ್ರಿಕರ ತಂಡಗಳು ಅಮರನಾಥಕ್ಕೆ ಹೊರಟಿವೆ. ಇಂದಿನಿಂದ ಮತ್ತಷ್ಟು ಬಿಗಿ ಭದ್ರತೆಯ ನಡುವೆ ಅಮರನಾಥ ಯಾತ್ರೆ ಮುಂದುವರೆಯುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೋಮವಾರ ರಾತ್ರಿಯಿಂದಲೇ ಭದ್ರತಾ ಪಡೆಗಳು ಜಮ್ಮು ತಲುಪುತ್ತಿವೆ. ಜಮ್ಮೂ ಕಾಶ್ಮೀರ ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದು, ಯಾತ್ರೆಗೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಸಿಆರ್ಪಿಎಫ್ ಐಜಿ ಜುಲ್ಫೀಕರ್ ಹಸನ್ ಹೇಳಿದ್ದಾರೆ.

ಅಮರನಾಥ ಯಾತ್ರಿಗಳ ಮೇಲೆ ಉಗ್ರರ ದಾಳಿ : 7 ಸಾವು, 19 ಜನರಿಗೆ ಗಾಯ

ಪವಿತ್ರ ಹಿಮಲಿಂಗ ದರ್ಶನ ಪಡೆದು ವಾಪಸಾಗುತ್ತಿದ್ದ ಭಕ್ತರ ಮೇಲೆ ಸೋಮವಾರ ಜಮ್ಮೂ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಯಾತ್ರಿಗಳ ಬಸ್ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು, 7 ಜನರ ಸಾವಿಗೆ ಕಾರಣರಾಗಿದ್ದರು.

ಆ ಚಿತ್ರಕ್ಕೆ ಕಥೆ ಬರೆದಿದ್ದು ‘ಯೋಗಿ’ಯಂತೆ