ಅಮೆಜಾನ್ ಭಾರತದ ಅತ್ಯಂತ ಆಕರ್ಷಕ ಇಂಟರ್ನೆಟ್ ಬ್ರಾಂಡ್

ಭಾರತದಲ್ಲಿ ಅತ್ಯಂತ ಆಕರ್ಷಕ ಇಂಟರ್ನೆಟ್ ಬ್ರಾಂಡ್ ಎಂಬ ಹೆಗ್ಗಳಿಕೆಗೆ ಅಮೆರಿಕದ ಆನ್ಲೈನ್ ರೀಟೈಲರ್ ಅಮೆಜಾನ್ ಪಾತ್ರವಾಗಿದೆ. ಸ್ವದೇಶಿ ಇ-ಕಾಮರ್ಸ್ ದಿಗ್ಗಜರಾದ ಫ್ಲಿಪ್ ಕಾರ್ಟ್, ಸ್ನಾಪ್ ಡೀಲ್ ಗಳನ್ನು ಹಿಂದಿಕ್ಕಿ ಅಮೆಜಾನ್ ಉತ್ತಮ ಸ್ಥಾನ ಗಳಿಸಿದೆ. ಸರ್ಚ್ ಇಂಜನ್ ದಿಗ್ಗಜ ಗೂಗಲ್‌ಗಿಂತಲೂ ಅಮೆಜಾನ್ ಸ್ಥಾನ ಉತ್ತಮವಾಗಿರುವುದು ವಿಶೇಷ.

ಟ್ರಸ್ಟ್ ರಿಸರ್ಚ್ ಅಡ್ವೈಸರಿ(ಟಿಆರ್‌ಎ) ‘ಭಾರತದಲ್ಲಿ ಅತ್ಯಂತ ಆಕರ್ಷಕ ಬ್ರಾಂಡ್‌ಗಳ ಅಧ್ಯಯನ 2016‘ ಹೆಸರಿನಲ್ಲಿ ಒಂದು ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಅನೆಜಾನ್ ಅತ್ಯಂತ ಆಕರ್ಷಕ ಇಂಟರ್ನೆಟ್ ಬ್ರಾಂಡ್ (ಒಟ್ಟಾರೆ 96ನೇ ರ‌್ಯಾಂಕ್) ಆಗಿ ಹೊರಹೊಮ್ಮಿದೆ. ಗೂಗಲ್ ಗಿಂತಲೂ ಎರಡು ಸ್ಥಾನ(ಒಟ್ಟಾರೆ 102) ಮೇಲಿದೆ. ದೇಶದ 16 ನಗರಗಳಲ್ಲಿ 3 ಸಾವಿರ ಗ್ರಾಹಕರ ಅಭಿಪ್ರಾಯಗಳನ್ನು ಪಡೆದು ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಇಂಟರ್ನೆಟ್ ವಿಭಾಗದಲ್ಲಿ ಫ್ಲಿಪ್ ಕಾರ್ಟ್ ಮೂರನೇ ಸ್ಥಾನ(ಒಟ್ಟಾರೆ 125 ನೇ ರ‌್ಯಾಂಕ್)ದಲ್ಲಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಫೇಸ್ಬುಕ್, ಸ್ನಾಪ್ ಡೀಲ್, ವಾಟ್ಸಾಪ್, ಪೇಟಿಎಂ, ಈಬೇ, ಒಎಲ್ಎಕ್ಸ್ ಇವೆ.