ಬಿಗ್ ಬ್ಯಾಸ್ಕೆಟ್ ಮೇಲೆ ಕಣ್ಣು ಹಾಕಿರುವ ಅಮೆಜಾನ್ |News Mirchi

ಬಿಗ್ ಬ್ಯಾಸ್ಕೆಟ್ ಮೇಲೆ ಕಣ್ಣು ಹಾಕಿರುವ ಅಮೆಜಾನ್

ಅಮೆರಿಕದ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಇದೀಗ ಆನ್ಲೈನ್ ದಿನಬಳಕೆಯ ವಸ್ತುಗಳ ಮಾರಾಟ ಸಂಸ್ಥೆಯಾದ ಬಿಗ್ ಬ್ಯಾಸ್ಕೆಟ್ ಖರೀದಿಯತ್ತ ಗಮನ ಹರಿಸಿದೆ. ಇದಕ್ಕೆ ಸಂಬಂಧಿಸಿದ ಮಾತುಕತೆ ಪ್ರಾಥಮಿಕ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಖರೀದಿ ಮಾತುಕತೆ ಯಶಸ್ವಿಯಾಗಬಹುದ ಅಥವಾ ವಿಫಲವಾಗಬಹುದು ಎಂದು ಸಂಬಂಧಿಸಿದ ಮೂಲಗಳು ಹೇಳುತ್ತಿವೆ.

ಸೂಪರ್ ಮಾರ್ಕೆಟ್ ಗ್ರಾಸರಿ ಸಪ್ಲೈಸ್ ಸಂಸ್ಥೆಯ ಭಾಗವಾದ ಬಿಗ್ ಬ್ಯಾಸ್ಕೆಟ್ ಪ್ರಸ್ತುತ ದೇಶಾದ್ಯಂತ 25 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ದುಬೈ ನ ಅಬ್ರಾಜ್ ಗ್ರೂಪ್, ಹೀಲಿಯೋಸ್ ವೆಂಚರ್ ಪಾರ್ಟನರ್ಸ್, ಬೆಸ್ಸೀ ಮರ್ ವೆಂಚರ್ ಪಾರ್ಟನರ್ಸ್ ಮುಂದಾದ ಹೂಡಿಕೆದಾರರಿಂದ ಕಳೆದ ವರ್ಷ 150 ಮಿಲಿಯನ್ ಡಾಲರ್ ಗಳನ್ನು ಸಂಗ್ರಹಿಸಿತ್ತು. ಹೊಸದಾಗಿ ಗೋದಾಮುಗಳನ್ನು ತೆರೆಯಲು, ಡೆಲಿವರಿ ಜಾಲವನ್ನು ಉತ್ತಮಗೊಳಿಸಲು ಮಾರ್ಚ್ ತಿಂಗಳಲ್ಲಿ ಟ್ರೈಫೆಕ್ಟಾ ಕ್ಯಾಪಿಟಲ್ ನಿಂದ ಮತ್ತೆ 7 ಮಿಲಿಯನ್ ಡಾಲರ್ ಗಳನ್ನು ಸಂಗ್ರಹಿಸಿತ್ತು. ಆದಾಯದಲ್ಲಿ ಗಣನೀಯ ಹೆಚ್ಚಳ ಕಾಣುತ್ತಿರುವ ಬಿಗ್ ಬ್ಯಾಸ್ಕೆಟ್, ಈಗಾಗಲೇ ಎರಡು ನಗರಗಳಲ್ಲಿ ಬ್ರೇಕ್ ಈವೆನ್ ಸಾಧಿಸಿದ್ದಾಗಿ ತಿಳಿದುಬಂದಿದೆ. ಮತ್ತೊಂದು ಕಡೆ ಅಮೆಜಾನ್ ಭಾರತದಲ್ಲಿ ತನ್ನ ಜಾಲವನ್ನು ಭಾರೀ ಪ್ರಮಾಣದಲ್ಲಿ ವಿಸ್ತರಿಸುತ್ತಿದೆ.

Loading...
loading...
error: Content is protected !!