ಮುಂದೆ ಅಮೆರಿಕಕ್ಕೆ ಹಿಂದೂ ಅಧ್ಯಕ್ಷರೂ ಬರಬಹುದು

***

ವಾಷಿಂಗ್ಟನ್: ಜನರ ಪ್ರತಿಭೆಯನ್ನು ಗುರುತಿಸಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುತ್ತಾ ಅಮೆರಿಕಾ ಮುಂದೆ ಸಾಗುತ್ತಿದೆ. ಭವಿಷ್ಯತ್ತಿನಲ್ಲಿ ಅಮೆರಿಕಕ್ಕೆ ಮಹಿಳಾ ಅಧ್ಯಕ್ಷರು ಮಾತ್ರವಲ್ಲ ಹಿಂದೂ ಅಧ್ಯಕ್ಷರೂ ಬರಬಹುದು ಎಂದು ಅಮೆರಿಕಾ ಅಧ್ಯಕ್ಷ ಒಬಾಮಾ ಹೇಳಿದ್ದಾರೆ. ವೈಟ್ ಹೌಸ್ ನಲ್ಲಿ ಆಯೋಜಿಸಲಾಗಿದ್ದ ತಮ್ಮ ಕೊನೆಯ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ.

ಮುಂದೆ ಎಲ್ಲಾ ರೀತಿಯ ಅಧ್ಯಕ್ಷರೂ ಬರುತ್ತಾರೆ, ಆಗ ಅವರನ್ನು ಏನೆಂದು ಕರೆಯಬೇಕು ಎಂಬುದು ನಮಗೆ ಗೊತ್ತಾಗದಿರಬಹುದು ಎಂದು ನಕ್ಕರು. ಅಮೆರಿಕದಲ್ಲಿ ಎಲ್ಲಾ ವರ್ಗಗಳಿಂದ ಪ್ರತಿಭಾವಂತರು ಬರುವುದನ್ನು ನಾವು ನೋಡುತ್ತೇವೆ. ಇದೇ ನಮ್ಮ ದೇಶದ ಬಲ ಎಂದು ಹೇಳಿದರು.