ರಷ್ಯಾ, ಅಮೆರಿಕಾ ಒಂದಾಗುತ್ತಿವೆಯಾ? – News Mirchi

ರಷ್ಯಾ, ಅಮೆರಿಕಾ ಒಂದಾಗುತ್ತಿವೆಯಾ?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲುವಿನಲ್ಲಿ ರಷ್ಯಾ ತಂತ್ರ ಕೆಲಸ ಮಾಡಿದೆಯಾ? ಅಥವಾ ಟ್ರಂಪ್ ರಷ್ಯಾದಿಂದ ಬ್ಲಾಕ್ ಮೇಲ್ ಗೆ ಒಳಗಾಗಲಿದ್ದಾರಾ? ಇವೆರಡು ವಿಷಯಗಳು ಅಮೆರಿಕದ ಹಲವರನ್ನು ಕಾಡುತ್ತಿರುವ ಪ್ರಶ್ನೆ. ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ಪುತಿನ್ ನಡುವೆ ಇರುವ ಸಂಬಂಧಗಳ ಕುರಿತು ಅಮೆರಿಕನ್ನರಿಗೆ ಏನೋ ಸಂಶಯ.

ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ರಷ್ಯಾ ಅಧ್ಯಕ್ಷರಿಗೆ ದೂರವಾಣಿ ಕರೆ ಮಾಡಿದ್ದರು. ಇಬ್ಬರು ನಾಯಕರ ನಡುವೆ ವಿಶ್ವದ ಸಮಸ್ಯೆಗಳ ಕುರಿತು ಚರ್ಚೆ ನಡೆದಿದೆ ಎನ್ನಲಾಗುತ್ತಿದ್ದು, ಭಯೋತ್ಪಾದನೆಯನ್ನು ನಿರ್ಣಾಮ ಮಾಡಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ತೀರ್ಮಾನಿಸಿದ್ದಾರೆ.

ಆದರೆ ರಷ್ಯಾ ಮೇಲೆ ಅಮೆರಿಕಾ ವಿಧಿಸಿದ್ದ ನಿರ್ಬಂಧಗಳನ್ನು ತೆರವುಗೊಳಿಸುವ ಕುರಿತು ಚರ್ಚೆಯ ವೇಳೆ ಪ್ರಸ್ತಾಪವಾಯಿತಾ ಇಲ್ಲವೇ ಎಂಬುದರ ಕುರಿತು ಉಭಯ ನಾಯಕರು ತುಟಿ ಬಿಚ್ಚಿಲ್ಲ.

Loading...

Leave a Reply

Your email address will not be published.