ಅಮೆರಿಕದಿಂದ ಭಾರತಕ್ಕೆ ಶಸ್ತ್ರಾಸ್ತ್ರ ಸಾಮರ್ಥ್ಯದ ಡ್ರೋನ್ ಗಳು

ಶಸ್ತ್ರಾಸ್ತ್ರ ಸಾಮರ್ಥ್ಯ ಹೊಂದಿರುವ ಡ್ರೋನ್ ಗಳನ್ನು ಅಮೆರಿಕಾ ಭಾರತಕ್ಕೆ ನೀಡಲಿದೆ. ಭಾರತೀಯ ವಾಯುಪಡೆಯ ಮನವಿಯ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರ ಸಾಮರ್ಥ್ಯದ ಡ್ರೋನ್ ಗಳನ್ನು ನೀಡುತ್ತೇವೆ ಸರಬರಾಜು ಮಾಡುತ್ತೇವೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಒಪ್ಪಂದದೊಂದಿಗೆ ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ. [ಇದನ್ನೂ ಓದಿ:ಅತಿ ಹೆಚ್ಚು ಶತಕ ಗಳಿಸಿದ ಎರಡನೇ ಆಟಗಾರನಾಗಿ ಕೊಹ್ಲಿ]

ಈ ವರ್ಷದ ಆರಂಭದಲ್ಲಿ ಡ್ರೋನ್ ಗಳನ್ನು ಒದಗಿಸಲು ಭಾರತೀಯ ವಾಯುಪಡೆಯು ಅಮೆರಿಕಕ್ಕೆ ಮನವಿ ಮಾಡಿತ್ತು. 8 ಬಿಲಿಯನ್ ಡಾಲರ್ ವೆಚ್ಚದೊಂದಿಗೆ 80-100 ಡ್ರೋನ್ ಗಳನ್ನು ಖರೀದಿಸಲು ಸಿದ್ಧ ಎಂದು ಭಾರತೀಯ ವಾಯುಪಡೆ ಹೇಳಿತ್ತು. ಜೂನ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸದ ಸಂದರ್ಭದಲ್ಲಿ ಶಸ್ತ್ರಾಸ್ತ್ರ ಸಾಮರ್ಥ್ಯವಿಲ್ಲದ ಡ್ರೋನ್ ಗಳನ್ನು ಮಾರಲು ಅಮೆರಿಕಾ ಅಂಗೀಕರಿಸಿತ್ತು. ಈ ಡ್ರೋನ್ ಗಳನ್ನು ಹಿಂದೂ ಮಹಾಸಾಗರದಲ್ಲಿ ನಿಗಾ ಕೆಲಸಗಳಿಗೆ ಬಳಸಲಾಗುತ್ತಿದೆ.

Get Latest updates on WhatsApp. Send ‘Add Me’ to 8550851559