ಸ್ಯಾಟಲೈಟ್ ಫೋನ್ ಹೊಂದಿದ್ದ ಅಮೆರಿಕಾ ಪ್ರಜೆಯ ಬಂಧನ

ತಿರುವನಂತಪುರಂ: ಸ್ಯಾಟಲೈಟ್ ಫೋನ್ ಹೊಂದಿದ್ದ ಅಮೆರಿಕ ಪ್ರಜೆ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.

ಆರೋಪಿಯನ್ನು ಅಮೆರಿಕದ ಮಾರ್ಕ್ ಆಂಡ್ರ್ಯೂ ಜೋರ್ಡನ್(31) ಎಂದು ಗುರುತಿಸಲಾಗಿದ್ದು, ಕ್ಯಾಲಿಫೋರ್ನಿಯಾದಲ್ಲಿ ವಕೀಲನೆಂದು ತಿಳಿದುಬಂದಿದೆ. ಅಮೆರಿಕಕ್ಕೆ ವಾಪಸಾಗುವಾಗ ವಿಮಾನ ನಿಲ್ದಾಣದ ಇಮ್ಮಿಗ್ರೇಷನ್ ಪಾಯಿಂಟ್ ಬಳಿ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದು, ನಂತರ ತಿರುವನಂತಪುರ ಜಿಲ್ಲೆಯ ವಳಿಯತೂರು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ಕ್ಯಾಲಿಫೋರ್ನಿಯಾದಲ್ಲಿ ಸ್ಯಾಟಲೈಟ್ ಫೋನ್ ಹೊಂದಿರುವುದು ಸರ್ವೇ ಸಾಮಾನ್ಯ ಎಂದು ಜೋರ್ಡನ್ ಹೇಳಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಂಡಿಯನ್ ವೈರ್ ಲೆಸ್ ಟೆಲಿಗ್ರಫಿ ಕಾಯ್ದೆಯಡಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

An American citizen was held with a satellite phone at Thiruvananthapuram International Airport.

Related News

Comments (wait until it loads)
Loading...
class="clear">