ಸಂಸತ್ತಿಗೆ ಅಮಿತ್ ಶಾ – News Mirchi

ಸಂಸತ್ತಿಗೆ ಅಮಿತ್ ಶಾ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಂಸತ್ತಿಗೆ ಕಾಲಿಡಲು ವೇದಿಕೆ ಸಿದ್ಧವಾಗಿದೆ. ಆಗಸ್ಟ್ 8 ರಂದು ನಡೆಯುವ ರಾಜ್ಯಸಭೆ ಚುನಾವಣೆಯಲ್ಲಿ ಅವರು ಗುಜರಾತಿನಿಂದ ಸ್ಪರ್ಧಿಸುತ್ತಾರೆ ಎಂದು ಬಿಜೆಪಿ ಸಂಸದೀಯ ಮಂಡಳಿ ಬುಧವಾರ ಘೋಷಿಸಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿಯವರೂ ಕೂಡಾ ಇದೇ ರಾಜ್ಯದಿಂದ ಮತ್ತೆ ಆಯ್ಕೆಯಾಗಲಿದ್ದಾರೆ. ರಾಜ್ಯಸಭೆಗೆ ಆಯ್ಕೆಯಾದರೆ ಮೋದಿಯವರ ಕ್ಯಾಬಿನೆಟ್ ನಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.

ಅಮಿತ್ ಶಾ ತಂತ್ರವಲ್ಲ, ಮೋದಿಯ ಸೂಚನೆಯಂತೆ…..

ಪಕ್ಷದ ಸಭೆಯ ನಂತರ ಮಾತನಾಡಿದ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಾ ಈ ಕುರಿತು ಮಾತನಾಡಿದರು. ಗುಜರಾತ್, ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಆಯ್ಕೆಯಾದ 9 ಜನರ ಹುದ್ದೆಗಳ ಅವಧಿ ಆಗಸ್ಟ್ 18ಕ್ಕೆ ಅಂತ್ಯವಾಗುತ್ತದೆ. ಇವರಲ್ಲಿ ಸ್ಮೃತಿ ಇರಾನಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಮುಂತಾದವರಿದ್ದಾರೆ. ಸದ್ಯ ಅಮಿತ್ ಶಾ ಗುಜರಾತ್ ವಿಧಾನಸಭೆ ಶಾಸಕರಾಗಿದ್ದಾರೆ.

Loading...