ಅಮಿತ್ ಶಾ ತೂಕ ಇಳಿಕೆ, ಬಾಲಿವುಡ್ ನಟಿಯರ ಫಿಟ್ನೆಸ್ ಗುಟ್ಟು ಇದೇನಂತೆ… – News Mirchi

ಅಮಿತ್ ಶಾ ತೂಕ ಇಳಿಕೆ, ಬಾಲಿವುಡ್ ನಟಿಯರ ಫಿಟ್ನೆಸ್ ಗುಟ್ಟು ಇದೇನಂತೆ…

ಬಿಜೆಪಿ ರಾಷ್ಟ್ರಾಧ್ಯಕ್ಷ ತಮ್ಮ ದೇಹದ ತೂಕ ಕರಗಿಸಲು ನಾನಾ ಪ್ರಯತ್ನಗಳು ಮಾಡಿದ್ದರಂತೆ. ಕೊನೆಗೆ ಯೋಗಾಸನಗಳನ್ನು ಮಾಡಿ ಸುಮಾರು 20 ಕೆ.ಜಿ ತೂಕ ಇಳಿದಿದ್ದಾರಂತೆ. ಇದೇ ವಿಷಯವನ್ನು ಪ್ರಸಿದ್ಧ ಯೋಗಾ ಗುರು ಬಾಬಾ ರಾಮದೇವ್ ಬಹಿರಂಗಪಡಿಸಿದ್ದಾರೆ. ಜುಲೈ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯಿರುವ ಹಿನ್ನೆಲೆಯಲ್ಲಿ ಮಂಗಳವಾರ ಗುಜರಾತ್ ನ ಅಹ್ಮದಾಬಾದ್ ನಲ್ಲಿ ಯೋಗಾ ಶಿಬಿರ ನಡೆಸಿದರು. ಈ ಶಿಬಿರಕ್ಕೆ ಹಾಜರಾದ ರಾಮದೇವ್, ಅಮಿತ್ ಶಾ ಅವರ ತೂಕ ಇಳಿಕೆಯ ಗುಟ್ಟನ್ನು ಹಂಚಿಕೊಂಡರು.

ಯೋಗಾ ಎನ್ನುವುದು ನಮ್ಮ ದಿನಚರಿಯ ಭಾಗವಾಗಬೇಕು ಎಂದು ಅವರು ಹೇಳಿದರು. ನಾವು ಆಡುವ ಆಟಗಳಲ್ಲಿ ಯೋಗಾ ಕೂಡಾ ಒಂದು ಆಟ ಎಂದ ರಾಮದೇವ್, ಯೋಗಾ ಒಂದು ಕ್ರೀಡೆ ಅಲ್ಲ ಎನ್ನುವವರು ಅಜ್ಞಾನಿಗಳು, ಯೋಗಾ ಕೂಡಾ ಒಂದು ಕ್ರೀಡೆಯಾಗಿದ್ದು ಅದನ್ನು ಕ್ರೀಡೆಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ಹೇಳಿದರು. ಅಷ್ಟೇ ಅಲ್ಲದೆ ಮುಂಬರುವ ಒಲಂಪಿಕ್ಸ್ ನಲ್ಲಿ ಯೋಗಾ ಸ್ಪರ್ಧೆಗಳನ್ನು ಆಯೋಜಿಸಲು ಪ್ರಯತ್ನ ನಡೆಸಬೇಕು ಎಂದು ಹೇಳಿದರು.

ಜನಸಾಮಾನ್ಯ ಮತ್ತು ಯೋಗಾ ಗುರುಗಳು ಮಾತ್ರ ಯೋಗಾಭ್ಯಾಸ ಮಾಡುತ್ತಿಲ್ಲ, ನಿಮ್ಮ ನೆಚ್ಚಿನ ಬಾಲಿವುಡ್ ನಟ ನಟಿಯರೂ ಕೂಡಾ ಪ್ರತಿನಿತ್ಯ ಯೋಗಾ ಮಾಡುತ್ತಾರೆ. ಅವರು ಅಷ್ಟೊಂದು ಬಿಡುವಿಲ್ಲದ ಕೆಲಸದ ಹೊರತಾಗಿಯೂ ಅಷ್ಟು ತೆಳ್ಳಗಿನ ಮತ್ತು ಸೊಗಸಾದ ಶರೀರವನ್ನು ಹೇಗೆ ಕಾಪಾಡಿಕೊಳ್ಳುತ್ತಾರೆಂದರೆ, ಅದಕ್ಕೆ ಉತ್ತರವೊಂದೇ ಯೋಗಾ. ಅದೇ ಅವರು ಆರೋಗ್ಯವಾಗಿ ಫಿಟ್ ಆಗಿರಲು ಕಾರಣ. ಶಿಲ್ಪಾ ಶೆಟ್ಟಿ ಮತ್ತು ಮಲೈಕಾ ಅರೋರಾ ಖಾನ್ ಮುಂತಾದ ಬಾಲಿವುಡ್ ನಟಿಯರು ಅಷ್ಟೊಂದು ಸ್ಲಿಮ್ ಮತ್ತು ಫಿಟ್ ಆಗಿರಲು ಪ್ರತಿನಿತ್ಯ ಅವರು ಕೆಲವು ಗಂಟೆಗಳ ಕಾಲ ಮಾಡುವ ಯೋಗಾ ಕಾರಣ ಬಾಬಾ ರಾಮದೇವ್ ಹೇಳಿದರು.

Loading...