ಬಿಜೆಪಿಯ ಹೊಸ ತಂತ್ರ: ರಕ್ಷಣಾ ಸಚಿವರಾಗಿ ಅಮಿತ್ ಶಾ? – News Mirchi

ಬಿಜೆಪಿಯ ಹೊಸ ತಂತ್ರ: ರಕ್ಷಣಾ ಸಚಿವರಾಗಿ ಅಮಿತ್ ಶಾ?

2019 ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಈಗಿನಿಂದಲೇ ತಂತ್ರ ರೂಪಿಸುತ್ತಿದೆ. ಈ ತಂತ್ರದ ಭಾಗವಾಗಿಯೇ ಈಗಾಗಲೇ ಬಿಹಾರದಲ್ಲಿ ನಿತೀಶ್ ಕುಮಾರ್ ಅವರನ್ನು ತನ್ನತ್ತ ಬಿಜೆಪಿ ಸೆಳೆದಿದೆ. ಒಂದು ಕಡೆ ಪಕ್ಷದಲ್ಲಿ ಮತ್ತೊಂದು ಕಡೆ ಕೇಂದ್ರ ಸಚಿವ ಸಂಪುಟದಲ್ಲಿಯೂ ಮಹತ್ವದ ಬದಲಾವಣೆಗೆ ಮುಂದಾಗುತ್ತಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರವರನ್ನು ಗುಜರಾತಿನಿಂದ ರಾಜ್ಯಸಭೆಗೆ ಕಣಕ್ಕಿಳಿಸುತ್ತಿರುವುದು ಈ ಬದಲಾವಣೆಗೆ ಮುನ್ಸೂಚನೆ ಎಂದು ಹೇಳಲಾಗುತ್ತಿದೆ. ಶಾಸಕರಾಗಿರುವ ಅಮಿತ್ ಶಾ ರವರನ್ನು ಗುಜರಾತ್ ಮುಖ್ಯಮಂತ್ರಿಯಾಗಿ ಮಾಡುತ್ತಾರೆ ಎಂಬ ಮಾತುಗಳು ಸ್ವಲ್ಪ ದಿನಗಳವರೆಗೂ ಕೇಳಿಬಂದಿದ್ದವು. ಈಗ ಅವರನ್ನು ರಾಜ್ಯಸಭೆಗೆ ಕಳುಹಿಸುವ ಮೂಲಕ ಬಿಜೆಪಿ ತಂತ್ರ ಬದಲಿಸಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಅಮಿತ್ ಶಾ ರವರಿಗೆ ಮಹತ್ವದ ಜವಾಬ್ದಾರಿ ನೀಡಲಾಗುತ್ತದೆ ಎನ್ನಲಾಗುತ್ತಿದೆ.

ಪಾಕಿಸ್ತಾನಕ್ಕೆ ಸುಷ್ಮಾ ಸ್ವರಾಜ್ ಪ್ರಧಾನಿಯಾಗಬೇಕಿತ್ತಂತೆ….

ಶೀಘ್ರದಲ್ಲಿಯೇ ನಡೆಯಲಿರುವ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ರಕ್ಷಣಾ ಖಾತೆ ನೀಡಬಹುದು. ರಕ್ಷಣಾ ಖಾತೆ ಅಥವಾ ಕೇಂದ್ರ ಗೃಹ ಖಾತೆಗಳಲ್ಲಿ ಒಂದನ್ನು ಅವರಿಗೆ ನೀಡಬಹುದು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಕೇಂದ್ರ ಸಚಿವರಾಗಿ ಅಮಿತ್ ಶಾ ಹೋದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಯನ್ನು ಅವರು ಬಿಡಬೇಕಾಗುತ್ತದೆ. ಹೀಗಾಗಿ ಖಾಲಿಯಾಗುವ ಬಿಜೆಪಿ ಅಧ್ಯಕ್ಷ ಹುದ್ದೆ ಯಾರಿಗೆ ಒಲಿಯುತ್ತದೆ ಎಂಬುದು ಈಗ ಕುತೂಹಲ ಮೂಡಿಸಿರುವ ವಿಷಯ. ಮುಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹುದ್ದೆಗೆ ರಾಮ್ ಮಾಧವ್, ರಾಜಸ್ಥಾನದ ಒಪಿ ಮಾಥುರ್, ಕೇಂದ್ರ ಸಚಿವ ಜೆಪಿ ನಡ್ಡಾ ಹೆಸರುಗಳೂ ಕೇಳಿ ಬರುತ್ತಿವೆ.

ಗಿಲಾನಿ ವಕೀಲನ ಮನೆಯಲ್ಲಿ ಎನ್.ಐ.ಎ ಶೋಧ

ಕೇಂದ್ರ ರಕ್ಷಣ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಗೋವಾ ಸಿಎಂ ಆದ ನಂತರ, ಅವರ ಖಾತೆಯನ್ನೂ ಆರ್ಥಿಕ ಸಚಿವ ಅರುಣ್ ಜೇಟ್ಲಿಯವರನ್ನು ನಿಭಾಯಿಸುತ್ತಿದ್ದಾರೆ. ಜೇಟ್ಲಿಯೊಂದಿಗೆ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ನರೇಂದ್ರ ಸಿಂಗ್ ತೋಮರ್, ಹರ್ಷವರ್ಧನ್ ಅವರು ಹೆಚ್ಚುವರಿ ಖಾತೆಗಳನ್ನು ನಿಭಾಯಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಜೆಡಿಯು ಬಿಜೆಪಿಯೊಂದಿಗೆ ಕೈಜೋಡಿಸಿದ್ದರಿಂದಾಗಿ, ಎನ್ಡಿಎ ನಲ್ಲಿ ಸೇರಲು ಸಿದ್ಧವಾಗುತ್ತಿದೆ. ಹೀಗಾಗಿ ಜೆಡಿಯು ಗೂ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಲು ಬಿಜೆಪಿ ಚಿಂತನೆ ನಡೆಸಿದೆ. ಜೆಡಿಯು ಗೆ ಎರಡು ಸಚಿವ ಸ್ಥಾನಗಳು ಸಿಗಬಹುದು ಎನ್ನಲಾಗಿದೆ.

Loading...