ಟ್ರಕ್ ನಲ್ಲಿ ಡಾಟಾ ಟ್ರಾನ್ಸ್‌ಫರ್..! ಇದು ಸ್ನೋಮೊಬೈಲ್

ಇಂಟರ್ನೆಟ್ ಮೂಲಕ ಸಣ್ಣ ಸಣ್ಣ ಕಡತಗಳನ್ನು ಕ್ಷಣಗಳಲ್ಲಿ ಮತ್ತೊಂದು ಕಡೆ ಕಳುಹಿಸಬಹುದು. ನೆಟ್ವರ್ಕ್ ಹೆಚ್ಚು ವೇಗವಿದ್ದರೆ, ಟಿಬಿ ಗಾತ್ರದ ಡಾಟಾ ಕೂಡಾ ಸುಲಭವಾಗಿ ಕಳುಹಿಸಬಹುದು. ಆದರೆ ಫೇಸ್ ಬುಕ್, ಗೂಗಲ್, ಅಮೆಜಾನ್ ನಂತಹ ಸಂಸ್ಥೆಗಳು ಕೆಲವು ಕೋಟಿ ಜಿಬಿ ಗಳಷ್ಟು ಡಾಟಾ ಸ್ಟೋರ್ ಮಾಡಿಟ್ಟಿರುತ್ತವೆ. ಅಷ್ಟು ಗಾತ್ರದ ದತ್ತಾಂಶಗಳನ್ನು ಮತ್ತೊಂದು ಕಡೆ ಕಳುಹಿಸಬೇಕಾಗಿ ಬಂದರೆ ಹೇಗೆ? ಎಷ್ಟೇ ವೇಗದ ಇಂಟರ್ನೆಟ್ ಇದ್ದರೂ ಅಷ್ಟು ಡಾಟಾ ಮತ್ತೊಂದು ಕಡೆ ಕಳುಹಿಸಲು ತಿಂಗಳುಗಳು, ವರ್ಷಗಳೇ ಬೇಕಾಗುತ್ತದೆ. ಆದ್ದರಿಂದಲೇ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಒಂದು ನೂತನ ಪರಿಹಾರವನ್ನು ಕಂಡುಹಿಡಿದಿದೆ. ಅದರ ಹೆಸರೇ ‘ಸ್ನೋ ಮೊಬೈಲ್’.

ಕಾರ್ಪೊರೇಟ್ ಕಂಪನಿಗಳು ಭಾರೀ ಪ್ರಮಾಣದಲ್ಲಿ ಸ್ಟೋರ್ ಮಾಡುವ ಡಾಟಾ ಮತ್ತೊಂದು ಕಡೆ ಕಳುಹಿಸಲು ಅನುಕೂಲವಾಗುವಂತೆ ಒಂದು ಟ್ರಕ್ ಅನ್ನು ವಿನ್ಯಾಸಗೊಳಿಸಿದೆ.

ಮೊಬೈಲ್ ಡಾಟಾ ಸೆಂಟರ್ ಅನ್ನು ಹೊಂದಿರುವ ಈ ಟ್ರಕ್ ಮೂಲಕ‌100 ಪೆಟಾ ಬೈಟ್(10 ಕೋಟಿ ಜಿಬಿ ಗಳು) ಡಾಟಾ ಟ್ರಾನ್ಸ್‌ಫರ್ ಮಾಡಬಹುದಂತೆ. ಇದೇ ಡಾಟಾವನ್ನು ಒಂದು ಜಿಬಿಪಿಎಸ್ ಸಾಮರ್ಥ್ಯವುಳ್ಳ ಇಂಟರ್ನೆಟ್ ಸಂಪರ್ಕದ ಮೂಲಕ ಟ್ರಾನ್ಸ್‌ಫರ್ ಮಾಡಬೇಕೆಂದರೆ ಸುಮಾರು 25 ವರ್ಷಗಳು ಬೇಕಾಗುತ್ತದೆ ಎನ್ನುತ್ತಾರೆ.

ಟ್ಯಾಂಕರ್ ನಿಂದ ನೀರು ತುಂಬಿಸಿದಂತೆ ಹೈಸ್ಪೀಡ್ ಫೈಬರ್ ಕೇಬಲ್ ಗಳಿಂದ ಈ ಟ್ರಕ್ ನ ಸರ್ವರ್ ಗೆ ಡಾಟಾ ಕಾಪಿ ಮಾಡಬೇಕು. ನಂತರ ಈ ಟ್ರಕ್ ಅನ್ನು ಮತ್ತೊಂದು ಡಾಟಾ ಸೆಂಟರ್ ಗೆ ಕಳುಹಿಸಿ ಅಲ್ಲಿ ಕಾಪಿ ಮಾಡಿದ ಡಾಟಾ ಡೌನ್ ಲೋಡ್ ಮಾಡಿಕೊಳ್ಳಬೇಕು. ಇದರಿಂದ ಖರ್ಚು ಮತ್ತು ಸಮಯ ಎರಡೂ ಉಳಿತಾಯವಾಗುತ್ತದೆ ಎಂದು ಹೇಳುತ್ತಿದೆ ಅಮೆಜಾನ್ ಕಂಪನಿ.

Related News

Comments (wait until it loads)
Loading...
class="clear">