ಮುಂದುವರೆದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ – News Mirchi

ಮುಂದುವರೆದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಸಂಘದ ಮುಖಂಡರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವಿನ ಮಾತುಕತೆ ವಿಫಲವಾಗಿದ್ದು, ವೇತನ ಹೆಚ್ಚಳಕ್ಕಾಗಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರ ಅನಿರ್ಧಿಷ್ಟಾವಧಿ ಮುಷ್ಕರ ಮುಂದುವರೆದಿದೆ.

ಉಪಚುನಾವಣೆ ಮುಗಿದ ನಂತರ ಮುಂದಿನ ತಿಂಗಳು 19 ರಂದು ಸಭೆ ನಡೆಸಿ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಪರಿಗಣಿಸುವುದಾಗಿ ಮುಖ್ಯಮಂತ್ರಿಗಳು ಸಂಘದ ಮುಖಂಡರಿಗೆ ಭರವಸೆ ನೀಡಿದ್ದಾರೆ. ಆದರೆ ತಮ್ಮ ಬೇಡಿಕೆಗಳು ಈಡೇರುವವರೆಗೂ ಧರಣಿ ಮುಂದುವರೆಸಿಯೇ ಸಿದ್ದ ಎಂದು ಸಂಘದ ಅಧ್ಯಕ್ಷೆ ವರಲಕ್ಷ್ಮಿಯವರು ಹೇಳಿದ್ದಾರೆ..

ಫ್ರೀಡಂ ಪಾರ್ಕ್ ಸುತ್ತಮುತ್ತ ರಸ್ತೆಬದಿಯಲ್ಲಿಯೇ ಮಲಗಿ ಕಾಲ ಕಳೆಯುತ್ತಿರುವ ಮಹಿಳೆಯರು ಶೌಚಾಲಯ, ಕುಡಿಯುವ ನೀರು, ಊಟಕ್ಕಾಗಿ ಪರದಾಡುವಂತಾಗಿದೆ. ಕೆಲವರಂತೂ ಪುಟ್ಟ ಮಕ್ಕಳನ್ನೂ ತಮ್ಮ ಜೊತೆ ಕರೆತಂದಿದ್ದು ಇರಲೂ ಕಷ್ಟ, ಅತ್ತ ವಾಪಸ್ ಹೋಗಲೂ ಆಗದೆ ಒದ್ದಾಡುತ್ತಿದ್ದಾರೆ.

Loading...

Leave a Reply

Your email address will not be published.