ಟೆಲಿಕಾಂ ಸ್ವತ್ತುಗಳನ್ನೆಲ್ಲಾ ಅಣ್ಣನ ಜಿಯೋಗೆ ಮಾರಿದ ಅನಿಲ್ |News Mirchi

ಟೆಲಿಕಾಂ ಸ್ವತ್ತುಗಳನ್ನೆಲ್ಲಾ ಅಣ್ಣನ ಜಿಯೋಗೆ ಮಾರಿದ ಅನಿಲ್

ಸಾಲದ ಸುಳಿಯಲ್ಲಿ ಸಿಲುಕಿರುವ ಅನಿಲ್ ಅಂಬಾನಿ, ತಮ್ಮ ರಿಲಯನ್ಸ್ ಕಮ್ಯೂನಿಕೇಷನ್ಸ್ ಲಿಮಿಟೆಡ್ ಗೆ ಸೇರಿದ ವೈರ್ಲೆಸ್ ಸ್ವತ್ತುಗಳನ್ನು ತಮ್ಮ ಅಣ್ಣ ಮುಖೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಗೆ ಮಾರುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಗೆ ಈ ಕುರಿತು ಎರಡೂ ಕಂಪನಿಗಳು ಮಾಹಿತಿ ನೀಡಿವೆ.

ಬಿಡ್ ಮೌಲ್ಯಮಾಪನ ಸಮಿತಿಯ ಮೇಲ್ವಿಚಾರಣೆಯಲ್ಲಿ ಪಾರದರ್ಶಕವಾಗಿ ನಿರ್ವಹಿಸಿದ ಬಿಡ್ ಪ್ರಕ್ರಿಯೆಯಲ್ಲಿ ರಿಲಯನ್ಸ್ ಜಿಯೋ ಅತಿ ಹೆಚ್ಚು ಬಿಡ್ ಸಲ್ಲಿಸಿದ ಸಂಸ್ಥೆಯಾಗಿತ್ತು ಎಂದು ರಿಲಯನ್ಸ್ ಕಮ್ಯೂನಿಕೇಷನ್ಸ್ ಹೇಳಿದೆ.

ಜಿಯೋ ಆಗಮನದ ನಂತರ ಸಾಲದ ಸುಳಿಯಲ್ಲಿ ಸಿಲುಕಿದ ರಿಲಯನ್ಸ್ ಕಮ್ಯೂನಿಕೇಷನ್ಸ್, ತನ್ನ ಎಲ್ಲಾ ಸ್ಪೆಕ್ಟ್ರಮ್, ಟವರ್, ಫೈಬರ್ ಆಪ್ಟಿಕ್ ಮತ್ತು ಟೆಲಿಕಾಂ ಮೂಲಸೌಕರ್ಯಗಳ ಸ್ವತ್ತುಗಳನ್ನು ಮಾರಾಟ ಮಾಡುತ್ತಿದೆ. ಈ ಮಾರಾಟ ಒಪ್ಪಂದದಿಂದಾಗಿ ಅಣ್ಣ ತಮ್ಮಂದಿರ ನಡುವೆ ಉಂಟಾಗಿದ್ದ 12 ವರ್ಷಗಳ ಬಿರುಕು ಅಂತ್ಯಗೊಳ್ಳಲಿದೆ. 2005 ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ವಿಭಜನೆಯಾಗಿದ್ದು, ಅಣ್ಣ ಮುಖೇಶ್ ಅಂಬಾನಿ ತೈಲ ಮತ್ತು ಅನಿಲ ವ್ಯವಹಾರಗಳನ್ನು ಇಟ್ಟುಕೊಂಡಿದ್ದರು. ಇನ್ನು ತಮ್ಮ ಅನಿಲ್ ಅಂಬಾನಿ ವಿದ್ಯುತ್ ಮತ್ತು ಟೆಲಿಕಾಂ ವ್ಯವಹಾರಗಳನ್ನು ತೆಗೆದುಕೊಂಡಿದ್ದರು.

ತನ್ನ ವೈರ್ಲೆಸ್ ಸ್ವತ್ತುಗಳ ಖರೀದಿಗಾಗಿ 15 ಸಂಸ್ಥೆಗಳು ಆಸಕ್ತಿ ವ್ಯಕ್ತಪಡಿಸಿವೆ ಎಂದು ರಿಲಯನ್ಸ್ ಕಮ್ಯೂನಿಕೇಷನ್ಸ್ ಮಂಗಳವಾರವಷ್ಟೇ ಘೋಷಿಸಿತ್ತು. ಈ ಮಾರಾಟದಿಂದಾಗಿ ಕಂಪನಿಯ ಸಾಲ ರೂ.39,000 ಕೋಟಿಗೆ ಇಳಿಕೆಯಾಗಲಿದೆ.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!