ಕಸಾಯಿಖಾನೆ ಬಂದ್ ಎಫೆಕ್ಟ್, ಹುಲಿ ಸಿಂಹಗಳಿಗೂ ತಟ್ಟಿದ ಬಿಸಿ – News Mirchi

ಕಸಾಯಿಖಾನೆ ಬಂದ್ ಎಫೆಕ್ಟ್, ಹುಲಿ ಸಿಂಹಗಳಿಗೂ ತಟ್ಟಿದ ಬಿಸಿ

ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಕಸಾಯಿಖಾನೆಗಳು ಮುಚ್ಚುತ್ತಿವೆ. ಹೀಗಾಗಿ ರಾಜ್ಯಾದ್ಯಂತ ದನದ ಮಾಂಸಕ್ಕೆ ತೀವ್ರ ಕೊರತೆ ಸೃಷ್ಟಿಯಾಗಿದೆ. ಇದರಿಂದಾಗಿ ರಾಜ್ಯದ ಪ್ರಮುಖ ಮಾಂಸಾಹಾರ ರೆಸ್ಟೋರೆಂಟ್‌ಗಳು ನಷ್ಟದ ದಾರಿ ಹಿಡಿದಿವೆ.

ಸುಮಾರು 120 ವರ್ಷಗಳಿಂದ ಲಕ್ನೋದಲ್ಲಿ ಬೀಫ್ ಕಬಾಬ್ ಗೆ ಹೆಸರುವಾಸಿಯಾಗಿರುವ ತುಂಡೇ ಕಬಾಬಿ ರೆಸ್ಟೋರೆಂಟ್ ಸಂಕಷ್ಟ ಎದುರಿಸುತ್ತಿದೆ. ದನದ ಮಾಂಸದ ಸರಬರಾಜು ಕಡಿಮೆಯಾದ್ದರಿಂದ ಕೋಳಿ, ಕುರಿ ಮಾಂಸದಿಂದ ಕಬಾಬ್ ತಯಾರಿಸಬೇಕಾಗಿ ಬರುತ್ತಿದೆ ಎಂದು ರೆಸ್ಟೋರೆಂಟ್ ಮಾಲೀಕರು ಹೇಳುತ್ತಿದ್ದಾರೆ. ಉತ್ತರಪ್ರದೇಶದಲ್ಲಿನ ಬಹುತೇಕ ಹೋಟೆಲ್‌ಗಳು ಈ ಪರಿಸ್ಥಿತಿಯನ್ನು ಎದುರಿಸುತ್ತಿವೆ.

ಮತ್ತೊಂದೆಡೆ ಪ್ರಾಣಿ ಸಂಗ್ರಹಾಲಯಗಳಲ್ಲಿರುವ ಹುಲಿ, ಸಿಂಹಗಳಿಗೂ ಅದರ ಬಿಸಿ ಮುಟ್ಟಿದೆ. ದನದ ಮಾಂಸದ ಕೊರತೆಯಿಂದ ಅವುಗಳಿಗೂ ಚಿಕನ್, ಮಟನ್ ನೀಡಬೇಕಾಗಿ ಬರುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಚಿಕನ್, ಮಟನ್‌ಗಳಲ್ಲಿ ಕೊಬ್ಬು ಕಡಿಮೆ ಇರುವುದರಿಂದ ಪ್ರಾಣಿಗಳಿಗೆ ಆಹಾರ ಸಾಕಾಗುತ್ತಿಲ್ಲ, ಅದೂ ಅಲ್ಲದೆ ಚಿಕನ್ ಮತ್ತು ಮಟನ್ ದರವೂ ಹೆಚ್ಚಾಗಿರುವುದರಿಂದ ಆರ್ಥಿಕ ಭಾರ ಉಂಟಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Loading...

Leave a Reply

Your email address will not be published.