ಚೆನ್ನೈನಲ್ಲಿ ರಸ್ತೆ ಕುಸಿತ, ಹಳ್ಳದಲ್ಲಿ ಸಿಲುಕಿದ ಬಸ್ಸು, ಕಾರು |News Mirchi

ಚೆನ್ನೈನಲ್ಲಿ ರಸ್ತೆ ಕುಸಿತ, ಹಳ್ಳದಲ್ಲಿ ಸಿಲುಕಿದ ಬಸ್ಸು, ಕಾರು

ಚೆನ್ನೈ: ಚೆನ್ನೈನ ಅಣ್ಣಾಸಲೈ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಭೂಕುಸಿತ ಉಂಟಾಗಿದ್ದು, ಭೂಕುಸಿತದಿಂದ ಸರ್ಕಾರಿ ಬಸ್ಸು ಮತ್ತು ಒಂದು ಕಾರು ಹಳ್ಳದಲ್ಲಿ ಸಿಕ್ಕಿಹಾಕಿಕೊಂಡ ಘಟನೆ ಭಾನುವಾರ ಮಧ್ಯಾಹ್ನ 2 ಗಂಟೆ ವೇಳೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಮೊದಲು ಬಸ್ಸಿನ ಟೈರ್ ಪಂಕ್ಚರ್ ಆಗಿದೆ ಎಂದು ಭಾವಿಸಿದ ಚಾಲಕ, ಬಸ್ ಇಳಿದು ನೋಡಿದಾಗ ರಸ್ತೆಯಲ್ಲಿ ಭೂಕುಸಿತವಾಗಿರುವುದು ಕಂಡು ಬಂದಿದೆ. ಕೂಡಲೇ ಪ್ರಯಾಣಿಕರನ್ನು ಎಚ್ಚರಿಸಿದ್ದರಿಂದ, ಪ್ರಯಾಣಿಕರು ಬಸ್ಸಿನಿಂದ ಸುರಕ್ಷಿತವಾಗಿ ಇಳಿದರು. ಪ್ರಯಾಣಿಕರು ಬಸ್ ಇಳಿದ ಕೂಡಲೇ ಬಸ್ ಆ ಹಳ್ಳಕ್ಕೆ ಕುಸಿಯಿತು. ರಸ್ತೆ ಸಮೀಪ ಮೆಟ್ರೋ ರೈಲು ಅಂಡರ್ ಗ್ರೌಂಡ್ ಕಾಮಗಾರಿ ನಡೆಯುತ್ತಿರುವ ಕಾರಣದಿಂದಲೇ ಈ ಘಟನೆ ನಡೆದಿದೆ ಎಂದು ಹೇಳುತ್ತಿದ್ದಾರೆ. ಈ ಘಟನೆಯಲ್ಲಿ ಬಸ್ಸಿನೊಂದಿಗೆ ಒಂದು ಕಾರು ಕೂಡಾ ಹಳ್ಳದಲ್ಲಿ ಕುಸಿದಿದೆ. ಪೊಲೀಸರು ಘಟನೆಯ ಸ್ಥಳಕ್ಕೆ ಆಗಮಿಸಿ ಸಂಚಾರ ಮಾರ್ಗ ಬದಲಿಸಿದರು. ನಂತರ ಕ್ರೇನ್ ಸಹಾಯದಿಂದ ಬಸ್ಸು ಮತ್ತು ಕಾರನ್ನು ಹೊರಗೆ ಎಳೆಯಲಾಯಿತು.

Loading...
loading...
error: Content is protected !!