ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಕೊಲೆ

ಬೆಂಗಳೂರು: ಮತ್ತೊಬ್ಬ ನಗರದಲ್ಲಿ ಮಂಗಳವಾರ ರಾತ್ರಿ ಕೊಲೆಯಾಗಿದ್ದಾರೆ. ಸುಂಕದಕಟ್ಟೆ ಸಮೀಪದ ಹೆಗ್ಗನಹಳ್ಳಿ ಕ್ರಾಸ್ ನಿವಾಸಿ 42 ವರ್ಷದ ಚಿಕ್ಕತಿಮ್ಮೇಗೌಡ ಹತ್ಯೆಯಾದವರು. ರಿಯಲ್ ಎಸ್ಟೇಟ್ ಮತ್ತು ಕಟ್ಟಡ ನಿರ್ಮಾಣ ಗುತ್ತಿಗೆದಾರಾರಾಗಿದ್ದ ತಿಮ್ಮೇಗೌಡರನ್ನು ಬೈಕಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

ಸ್ನೇಹಿತನೊಂದಿಗೆ ತಮ್ಮ ಹೊಸ ಮನೆಯ ಗೃಹಪ್ರವೇಶಕ್ಕಾಗಿ ಸಾಮಾನುಗಳನ್ನು ಮನೆಯಲ್ಲಿಟ್ಟು ಬರಲು ಬೈಕಿನಲ್ಲಿ ತಿಮ್ಮೇಗೌಡ ತೆರಳಿದ್ದರು. ವಾಪಸ್ಸು ಬರುವಾಗ ರಾತ್ರಿ ಸುಮಾರು 9:20 ರ ವೇಳೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಚಿಕ್ಕ ತಿಮ್ಮೇಗೌಡರನ್ನು ಹರಿತವಾದ ಆಯುಧದಿಂದ ಹಲ್ಲೆ ಮಾಡಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮೃತದೇಹವನ್ನು ಪೋಸ್ಟ್ ಮಾರ್ಟಮ್‌ಗಾಗಿ ವಿಕ್ಟೋರಿಯಾ ಅಸ್ಪತ್ರೆಗೆ ಕಳುಹಿಸಲಾಗಿದೆ. 6 ತಿಂಗಳ ಹಿಂದೆಯೂ ತಿಮ್ಮೇಗೌಡರ ಮೇಲೆ ಹತ್ಯಾ ಯತ್ನ ನಡೆದಿತ್ತು. ಹಳೇ ವೈಷಮ್ಯ ಅಥವಾ ಹಣಕಾಸು ವ್ಯವಹಾರವೇ ಕೊಲೆಗೆ ಕಾರಣವಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

Related News

loading...
error: Content is protected !!