ಗುಜರಾತ್ ಕಾಂಗ್ರೆಸ್ ಗೆ ಮತ್ತೊಂದು ಹೊಡೆತ – News Mirchi

ಗುಜರಾತ್ ಕಾಂಗ್ರೆಸ್ ಗೆ ಮತ್ತೊಂದು ಹೊಡೆತ

ಅಹಮದಾಬಾದ್: ರಾಜ್ಯಸಭೆ ಚುನಾವಣೆಗೂ ಮುನ್ನ ಗುಜರಾತ್ ನಲ್ಲಿ ಕಾಂಗ್ರೆಸ್ ಗೆ ಮತ್ತೊಂದು ಹೊಡೆತ ಬಿದ್ದಿದೆ. ಇತ್ತೀಚೆಗಷ್ಟೇ ಪ್ರಬಲ ಮುಖಂಡ ಶಂಕರ್ ಸಿಂಗ್ ವಾಘೇಲಾ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದರು. ಇದೀಗ ಅವರ ಆಪ್ತರೆನ್ನಲಾಗುತ್ತಿರುವ ಮೂವರು ಶಾಸಕರು ಗುರುವಾರ ತಮ್ಮ ಎಲ್ಲಾ ಸ್ಥಾನಮಾನಗಳಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಹೀಗಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲ 54ಕ್ಕೆ ಕುಸಿದಿದೆ.

ಆಗಸ್ಟ್ 8 ರಂದು ನಡೆಯುವ ರಾಜ್ಯಸಭೆ ಚುನಾವಣೆಯಲ್ಲಿ ರಾಜ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಿರಿಯ ನಾಯಕ ಅಹಮದ್ ಪಟೇಲ್ ನಾಮಪತ್ರ ಸಲ್ಲಿಸಿದ ಮಾರನೇ ದಿನವೇ ಈ ಬೆಳವಣಿಗೆ ನಡೆದಿದೆ. ಮೂವರು ಶಾಸಕರು ತಮ್ಮ ರಾಜೀನಾಮೆ ಪತ್ರಗಳನ್ನು ಸ್ಪೀಕರ್ ರಮಣ್ ಲಾಲ್ ವೋರಾ ಅವರಿಗೆ ನೀಡಿದ್ದಾರೆ. ಬಲ್ವಂತ್ ಸಿಂಗ್ ರಾಜ್ ಪೂತ್, ತೇಜಶ್ರೀ ಬೆನ್ ಪಟೇಲ್, ಪ್ರಹ್ಲಾದ್ ಪಟೇಲ್ ರಾಜೀನಾಮೆ ನೀಡಿದವರು.

ರಾಜ್ಯಸಭೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿರುವ ಅಹಮದ್ ಪಟೇಲ್ ರನ್ನು ಸೋಲಿಸಲು ಬಿಜೆಪಿ ತಂತ್ರ ರೂಪಿಸುತ್ತಿದೆ. ಬಲ್ವಂತ್ ಸಿಂಗ್ ರಾಜ್ ಪೂತ್ ಕಾಂಗ್ರೆಸ್ ಬಿಡುತ್ತಿದ್ದಂತೆ ಅವರನ್ನು ಮುಂದಿನ ರಾಜ್ಯ ಸಭಾ ಚುನಾವಣೆಯಲ್ಲಿ ಮೂರನೇ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದಾಗಿ ಬಿಜೆಪಿ ಪ್ರಕಟಿಸಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಸಭೆಗೆ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ.

ಗುಜರಾತ್ ಕಾಂಗ್ರೆಸ್ ಗೆ ದೊಡ್ಡ ಹೊಡೆತ, ಮಾಜಿ ಮುಖ್ಯಮಂತ್ರಿ ವಘೇಲಾ ರಾಜೀನಾಮೆ

Loading...