ಬೆಂಗಳೂರಿನಲ್ಲೇ ಐಫೋನ್ ತಯಾರಿಕೆ!

ಪ್ರಸಿದ್ಧ ಆಪಲ್ ಸಂಸ್ಥೆ ತನ್ನ ಐಫೋನ್ ಗಳನ್ನು ಇನ್ನು ಭಾರತದಲ್ಲಿಯೇ ತಯಾರಿಸಲಿದೆ. ಇದಕ್ಕಾಗಿ ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎನ್ನಲಾಗುತ್ತಿದೆ. ಮುಂದಿನ ಏಪ್ರಿಲ್ ನಿಂದ ಬೆಂಗಳೂರಿನಲ್ಲಿಯೇ ಭಾರತಕ್ಕೆ ಅಗತ್ಯವಾದ ಐಫೋನ್ ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ವಿಸ್ಟ್ರನ್ ತೈವಾನೀಸ್ ಒಇಎಂ ಎನ್ನುವ ಕಂಪನಿ ಆಪಲ್ ಸಂಸ್ಥೆಯ ಫೋನ್ ಗಳನ್ನು ತಯಾರಿಸಲಿದೆ. ಈಗ ಈ ಒಇಎಂ ಬೆಂಗಳೂರಿನ ಇಂಡಸ್ಟ್ರಿಯಲ್ ಹಬ್ ಆದ ಪೀಣ್ಯದಲ್ಲಿ ಐಫೋನ್ ತಯಾರಿಕೆಯನ್ನು ಆರಂಭಿಸಲು ಉದ್ದೇಶಿಸಿದೆ ಎಂದು ಮೂಲಗಳು ಹೇಳುತ್ತಿವೆ.

ಆಪಲ್ ಸಂಸ್ಥೆಯ ವಿಶ್ವಾಸಾರ್ಹ ಮೂಲಗಳ ಪ್ರಕಾರ, ಭಾರತದಲ್ಲಿ ಮುಂದಿನ ವರ್ಷಾಂತ್ಯದ ವೇಳೆಗೆ ಐಫೋನ್ ತಯಕಾರಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಪಲ್ ಸಂಸ್ಥೆ ಗಂಭೀರವಾಗಿ ಚಿಂತಿಸುತ್ತಿದೆ. ಇದಕ್ಕಾಗಿ ಬೆಂಗಳೂರು ನಗರವನ್ನೇ ಎಲ್ಲರೂ ಅನುಮೋದಿಸಿದ್ದಾಗಿ ತಿಳಿದು ಬಂದಿದೆ.

ಭಾರತದಲ್ಲಿಯೇ ಇವುಗಳನ್ನು ನೇರವಾಗಿ ತಯಾರಿಸುವುದರಿಂದ ಬೆಲೆಗಳಲ್ಲಿ ಕೆಲ ಬದಲಾವಣೆಗಳು ಇರಲಿವೆ. ಆದರೆ, ಮಹಾರಾಷ್ಟ್ರದಲ್ಲಿ ಕೂಡಾ ಫಾಕ್ಸ್ ಕಾನ್ ಎಂಬ ಕಂಪನಿ ಆಪಲ್ ಫೋನ್ ಗಳನ್ನು ತಯಾರಿಸಲು ಒಪ್ಪಂದ ಮಾಡಿಕೊಂಡಿದ್ದರೂ, ಅದು ಷಿಯಾಮಿ, ಒನ್ ಪ್ಲಸ್ ನಂತ ಲೋಕಲ್ ಬ್ರಾಂಡ್ ಗಳ ಫೋನ್ ಗಳನ್ನೂ ತಯಾರಿಸಿ ಕೊಡಲು ಒಪ್ಪಂದ ಮಾಡಿಕೊಂಡಿದೆ, ಆದರೆ ಬೆಂಗಳೂರಿನಲ್ಲಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಆಪಲ್ ಐಫೋನ್ ಗಳ ಮೇಲೆ ಗಮನ ಹರಿಸಲಾಗುತ್ತದೆಯಂತೆ.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache