ಈಗ ಕಡಿಮೆ ದರದಲ್ಲಿ ಐಫೋನ್ ಬದಲಿ ಬ್ಯಾಟರಿಗಳನ್ನು ಪಡೆಯಬಹದು |News Mirchi

ಈಗ ಕಡಿಮೆ ದರದಲ್ಲಿ ಐಫೋನ್ ಬದಲಿ ಬ್ಯಾಟರಿಗಳನ್ನು ಪಡೆಯಬಹದು

ಐಫೋನ್ 6, ಐಫೋನ್ 6ಎಸ್, ಐಫೋನ್ ಎಸ್ಇ ಮತ್ತು ಐಫೋನ್ 7 ನಂತ ಹಳೆಯ ಸ್ಮಾರ್ಟ್ ಫೋನ್ ಗಳ ನಿಧಾನಗತಿಯ ಕಾರ್ಯನಿರ್ವಹಣೆಗೆ ಕಳೆದ ವಾರ ಕ್ಷಮೆಯಾಚಿಸಿದ್ದ ಆಪಲ್ ಸಂಸ್ಥೆ, ಸಮಸ್ಯೆ ಬಗೆಹರಿಸಲು ಬದಲಿ ಬ್ಯಾಟರಿಗಳ ಬೆಲೆಗಳಲ್ಲಿ ಕಡಿತಗೊಳಿಸುತ್ತಿರುವುದಾಗಿಯೂ ಘೋಷಿಸಿತ್ತು.

ಎನ್.ಡಿ.ಎ ಭಾಗವಾಗಲಿದೆಯೇ ರಜನಿ ಪಕ್ಷ?

ಇದೀಗ ಭಾರತದಲ್ಲಿ ರೂ.6500 ಇದ್ದ ಆಪಲ್ ಸ್ಮಾರ್ಟ್ ಫೋನ್ ಬ್ಯಾಟರಿಗಳ ಬೆಲೆಗಳನ್ನು ರೂ.2000 (ತೆರಿಗೆ ಹೊರತುಪಡಿಸಿ) ಕ್ಕೆ ಇಳಿಸಿದೆ. ಈಗ ಬ್ಯಾಟರಿ ಬದಲಾವಣೆ ಸೇವೆಯನ್ನು ವಿಶ್ವಾದ್ಯಂತ ಆರಂಭಿಸಲಾಗಿದೆ. ಈಗ ಭಾರತೀಯ ಗ್ರಾಹಕರು ಕಡಿತಗೊಂಡ ಹೊಸ ದರಗಳಲ್ಲಿ ಬ್ಯಾಟರಿಗಳನ್ನು ಬದಲಾಯಿಸಬಹುದು ಎಂದು ಆಪಲ್ ಸಂಸ್ಥೆ ಪ್ರಕಟಿಸಿದೆ.

ಜಿಯೋ ಹೊಸ ವರ್ಷದ ಆಫರ್ ರೂ.199 ಮತ್ತು ಏರ್ಟೆಲ್ ವೊಡಾಫೋನ್ ಕೊಡುಗೆಗಳು

ಎಲ್ಲಾ ಐಫೋನ್ 6 ಮತ್ತು ನಂತರದ ಸ್ಮಾರ್ಟ್ ಫೋನ್ ಗಳನ್ನು ಹೊಂದಿರುವವರಿಗೆ ಬ್ಯಾಟರಿ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಕಂಪನಿ ಹೇಳಿದೆ. ಅಗತ್ಯವಿರುವಷ್ಟು ಬ್ಯಾಟರಿಗಳನ್ನು ಸರಬರಾಜು ಮಾಡಲು ಇನ್ನಷ್ಟು ಸಮಯ ಬೇಕಿದೆ. ಸದ್ಯ ಬದಲಿ ಬ್ಯಾಟರಿಗಳ ಸರಬರಾಜು ಸೀಮಿತವಾಗಿರಲಿದೆ ಎಂದು ಸಂಸ್ಥೆ ಹೇಳಿದೆ.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!