ಸೇನೆ, ವಾಯುಪಡೆಗಳ ಜಂಟಿ ಸಮರಾಭ್ಯಾಸ

ಜೈಸಲ್ಮೇರ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಡಗಿದ್ದ ಉಗ್ರರ ಶಿಬಿರಗಳ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ಸ್ ರೀತಿಯಲ್ಲಿ, ಅದಕ್ಕಿಂತಲೂ ಎರಡು ಪಟ್ಟು ಹೊಡೆತ ನೀಡುವಂತಹ ಸಮರಾಭ್ಯಾಸಗಳನ್ನು ಭಾರತೀಯ ಸೇನೆ ಮತ್ತು ಏರ್ ಫೋರ್ಸ್ ಜಂಟಿಯಾಗಿ ನಡೆಸಿದವು. ‘ಹೆಲಿಬೋರ್ನ್ ಆಪರೇಷನ್’ ಹೆಸರಿನಲ್ಲಿ ರಾಜಸ್ಥಾನದ ಜೈಸಲ್ಮೇರ್ ನ ಮರಳುಗಾಡಿನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಸಮರಾಭ್ಯಾಸ ಆರಂಭವಾಗಿದೆ.

ಯುದ್ಧ ಸಮಯದಲ್ಲಿ ಅನಿರೀಕ್ಷಿತ ಘಟನೆಗಳು ಎದುರಾದಾಗ, ಸರ್ಜಿಕಲ್ ಸ್ಟ್ರೈಕ್ಸ್ ಮಾಡಬೇಕಾಗಿ ಬಂದಾಗ ಸೇನೆ, ವಾಯುಪಡೆಗಳು ಹೇಗೆ ಪರಸ್ಪರ ಸಹಕಾರ ಹೊಂದಿರಬೇಕು? ನಮ್ಮ ಕಡೆ ಕಡಿಮೆ ನಷ್ಟದಿಂದ ಶತೃವನ್ನು ಹೇಗೆ ಮಣ್ಣು ಮುಕ್ಕಿಸಬೇಕು? ಮುಂತಾದ ಅಭ್ಯಾಸಗಳನ್ನು ಕೃತಕ ಯುದ್ಧ ವಾತಾವರಣದಲ್ಲಿ ಕೈಗೊಂಡಿದ್ದರ ಜೊತೆಗೆ ಸಂಪರ್ಕ ವ್ಯವಸ್ಥೆಯ ಬಳಕೆಯ ಬಗ್ಗೆ ಅಭ್ಯಾಸ ನಡೆಸಿದರು. ಯುದ್ಧದ ಹೆಲಿಕ್ಯಾಪ್ಟರ್‌ಗಳು, ದೂರದ ಗುರಿಯನ್ನು ಬೇಧಿಸಬಲ್ಲ ಶಸ್ತ್ರಾಸ್ತ್ರಗಳನ್ನು ಬಳಸಲಾಯಿತು.

Related News

Loading...

Leave a Reply

Your email address will not be published.

error: Content is protected !!