ಯೋಧರ ಗುಂಡಿಗೆ ಇಬ್ಬರು ಉಗ್ರರು ಬಲಿ

ಬಾರಾಮುಲ್ಲಾ: ಜಮ್ಮೂ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟಾರ್ ನಲ್ಲಿನ ನಿಯಂತ್ರಣ ರೇಖೆ ಬಳಿ ಒಳನುಸುಳಲು ಪ್ರಯತ್ನಿಸುತ್ತಿದ್ದ ಉಗ್ರರನ್ನು ಯೋಧರು ಕೊಂದಿದ್ದು, ಒಳನುಸುಳುವ ಉಗ್ರರ ಯತ್ನವನ್ನು ಜಮ್ಮೂ ಕಾಶ್ಮೀರ ಪೊಲೀಸರು ಮತ್ತು ಸೇನೆ ವಿಫಲಗೊಳಿಸಿವೆ ಎಂದು ಜಮ್ಮು ಕಾಶ್ಮೀರ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಉಗ್ರರ ಚಲನವಲನ ಪತ್ತೆ ಹಚ್ಚಿ ತಡೆಯಲು ಮುಂದಾದ ಸೈನಿಕರ ಮೇಲೆ ವಿವೇಚನಾರಹಿತರಾಗಿ ಗುಂಡಿನ ದಾಳಿ ನಡೆಸುತ್ತಾ ಉಗ್ರರು ನಿಯಂತ್ರಣ ರೇಖೆಯತ್ತ ಪರಾರಿಯಾಲು ಯತ್ನಿಸಿದರು. ಈ ವೇಳೆ ಯೋಧರ ಗುಂಡಿಗೆ ಬಲಿಯಾಗಿದ್ದಾರೆ.

Get Latest updates on WhatsApp. Send ‘Add Me’ to 8550851559