ಮತ್ತೆ ಅದೇ ಸರ್ಜಿಕಲ್ ಸ್ಟ್ರೈಕ್ಸ್ ಅಲ್ಲ, ಅಚ್ಚರಿಗೊಳಿಸುವ ಆಯ್ಕೆಗಳು ಸೇನೆ ಬಳಿ ಇವೆ

ನ್ಯೂಸ್ ಮಿರ್ಚಿ. 2, ನವೆಂಬರ್: ಪಾಕ್ ಆಕ್ರಮಿತ ಭೂಪ್ರದೇಶದೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ ರೀತಿಯ ಕಾರ್ಯಚರಣೆಗಳನ್ನೇ ಪುನರಾವರ್ತನೆ ಮಾಡುವುದಿಲ್ಲ ಎಂದು ಹೇಳಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಭಾರತೀಯ ಸೇನೆಯ ಬಳಿ ಹಲವಾರು ಇಂತಹ ಪ್ರತೀಕಾರದ ಆಯ್ಕೆಗಳಿವೆ ಎಂದು ಹೇಳಿದ್ದಾರೆ. ರಕ್ಷಣಾ ವಿಶ್ಲೇಷಕ ನಿತಿನ್ ಗೋಖಲೆ ಅವರು ಬರೆದಿರುವ ‘ಸೆಕ್ಯೂರಿಂಗ್ ಇಂಡಿಯಾ ದ ಮೋದಿ ವೇ’ ಎಂಬು ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ.

ಟ್ರಿಪಲ್ ತಲಾಖ್ ಗೆ ಕಾಯ್ದೆಯ ಕರಡು ಸಿದ್ಧ, ತಪ್ಪಿತಸ್ಥರಿಗೆ 3 ವರ್ಷ ಜೈಲು

2015 ರಲ್ಲಿ ಮಯನ್ಮಾರ್ ನಲ್ಲಿ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 2016 ರಲ್ಲಿ ಕೈಗೊಂಡ ಸರ್ಜಿಕಲ್ ಸ್ಟ್ರೈಕ್ ನಂತಹ ಕಾರ್ಯಚರಣೆಗಳು ಮುಂದುವರೆಸಲು ಸೇನೆ ಇನ್ನೂ ಸಮರ್ಥವಾಗಿದೆಯೇ ಎಂಬ ಪ್ರಶ್ನೆಗೆ ರಾವತ್ ಉತ್ತರಿಸಿದರು.

ನಿಯಂತ್ರಣ ರೇಖೆಯಲ್ಲಿ ಈ ಹಿಂದೆ ನಡೆಸಿದಂತಹ ಸರ್ಜಿಕಲ್ ಸ್ಟ್ರೈಕ್ಸ್ ಹೊರತಾಗಿಯೂ ಸೇನೆಯ ಬಳಿ ವಿವಿಧ ಆಯ್ಕೆಗಳಿವೆ. ಒಂದೇ ರೀತಿಯ ದಾಳಿಗಳನ್ನು ನಡೆಸಿದರೆ ಅಚ್ಚರಿಯಿರುವುದಿಲ್ಲ. ಶತೃಗಳ ಮೇಲೆ ಅಚ್ಚರಿಯ ದಾಳಿ ನಡೆಸಬೇಕಾದರೆ ನಾವು ಹೊಸದಾಗಿ ಏನಾದರೂ ಯೋಜನೆ ಮಾಡಬೇಕು, ಈ ಮೂಲಕ ಶತೃಗಳನ್ನು ಏನು ನಡೆಯಬಹುದು ಎಂದು ಊಹಿಸಲು ಬಿಡುವುದು ಉತ್ತಮ ಎಂದು ಅವರು ಹೇಳಿದರು.

ಮೈಯನ್ಮಾರ್ ಗಡಿಯಲ್ಲಿ ಮಣಿಪುರದಲ್ಲಿ 18 ಭಾರತೀಯ ಸೈನಿಕರು ಹುತಾತ್ಮರಾದ ನಂತರ ನಾವು ಕಠಿಣ ಸಂದೇಶ ಕಳುಹಿಸಬೇಕಿತ್ತು. ಹಾಗಾಗಿ ಮಯನ್ಮಾರ್ ನಲ್ಲಿ ಸರ್ಜಿಕಲ್ ಸ್ಟ್ರೈಕ್ಸ್ ನಡೆಸಬೇಕಾಯಿತು ಎಂದು ವಿವರಿಸಿದರು.

Get Latest updates on WhatsApp. Send ‘Add Me’ to 8550851559