ಮೊಬೈಲ್ ಬಳಕೆ ಪ್ರಶ್ನಿಸಿದ ಆರ್ಮಿ ಮೇಜರ್ ರನ್ನು ಕೊಂದ ಯೋಧ |News Mirchi

ಮೊಬೈಲ್ ಬಳಕೆ ಪ್ರಶ್ನಿಸಿದ ಆರ್ಮಿ ಮೇಜರ್ ರನ್ನು ಕೊಂದ ಯೋಧ

ಶ್ರೀನಗರ: ಭಾರತೀಯ ಸೇನೆಯಲ್ಲಿ ಮೇಜರ್ ರ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯನ್ನು ಯೋಧರೊಬ್ಬರು ಹತ್ಯೆ ಮಾಡಿರುವುದಾಗಿ ವರದಿಯಾಗಿದೆ. ಕರ್ತವ್ಯನಿರತರಾಗಿದ್ದ ಸಮಯದಲ್ಲಿ ಯೋಧರೊಬ್ಬರು ಮೊಬೈಲ್ ಬಳಸುತ್ತಿದ್ದುದನ್ನು ಪ್ರಶ್ನಿಸಿದ್ದೇ ಮೇಜರ್ ಜೀವಕ್ಕೆ ಮುಳುವಾಗಿದೆ. ಮೊಬೈಲ್ ಬಳಕೆಯನ್ನು ಪ್ರಶ್ನಿಸಿದ್ದ ಮೇಜರ್ ರವರನ್ನು ಗುಂಡು ಹಾರಿಸಿ ಯೋಧ ಕೊಂದಿದ್ದಾಗಿ ತಿಳಿದು ಬಂದಿದೆ.

ಸುಮಾರು ಐದು ಬುಲೆಟ್ ಗಳು ಮೇಜರ್ ಶಿಖರ್ ಥಾಪಾ ದೇಹ ಹೊಕ್ಕಿದ್ದು, ಅವರು ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಸೇನಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

  • No items.

Loading...
loading...
error: Content is protected !!