ಮಮತಮ್ಮನ ಸೆಲ್ಫ್ ಗೋಲ್ – News Mirchi

ಮಮತಮ್ಮನ ಸೆಲ್ಫ್ ಗೋಲ್

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಟೋಲ್ ಗೇಟ್ ಗಳ ಬಳಿ ಕೇಂದ್ರ ಭದ್ರತಾ ಪಡೆಗಳ ಕಳುಹಿಸಿದ್ದ ವಿಷಯದಲ್ಲಿ ಸಿಎಂ ಮಮತಾ ಬ್ಯಾನರ್ಜಿ ರವರದ್ದೇ ತಪ್ಪು ಎಂದು ಸೇನೆ ಸಾಬೀತುಪಡಿಸಿದೆ.

ನಮಗೆ ಮಾಹಿತಿ ನೀಡದೆ ಕೇಂದ್ರ ಪಡೆಗಳನ್ನು ತಮ್ಮ ರಾಜ್ಯದೊಳಗೆ ಕಳುಹಿಸಿದ್ದಾರೆ ಎಂದು ವಿರೋಧಿಸಿ ಮಮತಾ ಬ್ಯಾನರ್ಜಿ ನಾನಾ ರಾದ್ಧಾಂತ ಮಾಡಿದರು. ಹೀಗಾಗಿ ಕೇಂದ್ರದ ಭದ್ರತಾ ಪಡೆಗಳನ್ನು ಹಿಂದೆ ಕರೆಸಿಕೊಳ್ಳಲಾಯಿತು. ಆದರೆ ಪ.ಬಂಗಾಳ ಸರ್ಕಾರಕ್ಕೆ ಮಾಹಿತಿ ನೀಡಿಯೇ ಭದ್ರತಾ ಪಡೆಗಳನ್ನು ಕಳುಹಿಸಿದ್ದೆವು ಎಂದು ಸೇನೆ ಬಹಿರಂಗಪಡಿಸಿದೆ.

ಪ.ಬಂಗಾಳದ ವಿವಿಧ ಸರ್ಕಾರಿ ಕಛೇರಿಗಳಿಂದ ತಮಗೆ ಬಂದಿದ್ದ ಪತ್ರಗಳನ್ನು ಸೇನೆ ಬಿಡುಗಡೆ ಮಾಡಿದೆ. ಬೆಂಗಾಲ್ ಜಿಒಸಿಗೆ ಸೇರಿದ ಮೇಜರ್ ಜನರಲ್ ಸುನಿಲ್ ಯಾದವ್ ಈ ಪತ್ರವನ್ನು ಬಿಡುಗಡೆ ಮಾಡಿದರು. ಬೆಂಗಾಲ್ ಸರ್ಕಾರಿ ಕಛೇರಿಗಳಿಂದ ಎಲ್ಲಾ ಅನುಮತಿಗಳನ್ನು ಪಡೆದ ನಂತರವೇ ಪಡೆಗಳನ್ನು ಕಳುಹಿಸಿದ್ದೇವೆ ಎಂದು ಅವರು ಬಹಿರಂಗಪಡಿಸಿದರು.

ಪ.ಬಂಗಾಳಕ್ಕೆ ಕೇಂದ್ರ ಭದ್ರತಾ ಪಡೆಗಳನ್ನು ಕಳುಹಿಸುವ ಒಂದು ವಾರದ ಮುನ್ನವೇ (ನವೆಂಬರ್ 24) ರಂದು ಅನುಮತಿ ಪಡೆದಿದ್ದೇವೆ ಎಂದು ಅವರು ಹೇಳಿದ್ದಾರೆ. ಸೇನೆಯ ಪ್ರತಿಕ್ರಿಯೆಯಿಂದ ಮಮತ ಇಂಗು ತಿಂದ ಮಂಗನಂತಾಗಿದ್ದಾರೆ. ತಮಗೆ ಮಾಹಿತಿ ನೀಡದೇ ಕೇಂದ್ರದ ಪಡೆಗಳನ್ನು ನಿಯೋಜಿಸಿದ್ದಾರೆ ಎಂದು ಗದ್ದಲವೆಬ್ಬಿಸಿದ ಆಕೆ ಸೆಲ್ಫ್ ಗೋಲ್ ಮಾಡಿಕೊಂಡಿದ್ದಾರೆ. ಈಗ ಅವರ ಪ್ರತಿಕ್ರಿಯೆ ಹೇಗಿರುತ್ತೇ?

41480671164_unknown

71480671244_unknown

51480671301_unknown

51480671112_unknown

Loading...

Leave a Reply

Your email address will not be published.