ಸೇನಾ ನೇಮಕಾತಿ ಪ್ರಶ್ನೆಪತ್ರಿಕೆ ಲೀಕ್, 2 ಲಕ್ಷಗಳಿಗೆ ಮಾರಾಟ?

ಸೇನಾ ನೇಮಕಾತಿಯ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ಸೇನಾ ನೇಮಕಾತಿಗಾಗಿ ಭಾನುವಾರ ದೇಶಾದ್ಯಂತ ಪರೀಕ್ಷೆ ನಡೆಯುತ್ತಿದೆ. ಆದರೆ ಶನಿವಾರ ರಾತ್ರಿ ಕೆಲ ವ್ಯಕ್ತಿಗಳು ಪುಣೆಯಲ್ಲಿ ಆರ್ಮಿ ರಿಕ್ರೂಟ್ಮೆಂಟ್ ಪ್ರಶ್ನೆಪತ್ರಿಕೆಗಳನ್ನು ರೂ.2 ಲಕ್ಷಗಳಿಗೆ ಮಾರುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.

ಪುಣೆ, ನಾಗ್ಪುರ, ಗೋವಾಗಳಿಗೆ ಸೇರಿದ 18 ಜನರನ್ನು ಪೊಲೀಸರು ಬಂಧಿಸಿ ಅವರ ಬಳಿ ಇದ್ದ ಪ್ರಶ್ನಪತ್ರಿಕೆಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಅಸಲಿ ಪ್ರಶ್ನಿಪತ್ರಿಕೆಗಳೊಂದಿಗೆ ಹೋಲಿಸಿ ನೋಡಿದಾಗ ಲೀಕ್ ಆಗಿರುವುದು ಖಚಿತವಾಗಿದೆ. ಈ ಗ್ಯಾಂಗ್ ಸುಮಾರು 350 ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆಗಳನ್ನು ಮಾರಿರುವುದಾಗಿ ಪೊಲೀಸರು, ಸೇನಾ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಈ ಕುರಿತು ತನಿಖೆ ಆರಂಭಿಸಿದ್ದಾರೆ.