ಸ್ವದೇಶಿ ನಿರ್ಮಿತ ರೈಫಲ್ ಗಳನ್ನು ತಿರಸ್ಕರಿಸಿದ ಸೇನೆ

ಎಕೆ-47 ಮತ್ತು ಇನ್ಸಾಸ್ (ಇಂಡಿಯನ್ ನ್ಯೂ ಸ್ಮಾಲ್ ಆರ್ಮ್ಸ್ ಸಿಸ್ಟಮ್ಸ್) ರೈಫಲ್ ಗಳ ಸ್ಥಾನವನ್ನು ತುಂಬಲು ದೇಶೀಯವಾಗಿ ನಿರ್ಮಿಸಿದ್ದ 7.62×51 ಎಂ.ಎಂ. ಅಸಾಲ್ಟ್ ರೈಫಲ್ ಗಳನ್ನು ಭಾರತೀಯ ಸೇನೆ ತಿರಸ್ಕರಿಸಿದೆ. ಕಳಪೆ ಗುಣಮಟ್ಟ ಮತ್ತು ಅಷ್ಟೊಂದು ಪರಿಣಾಮಕಾರಿಯಲ್ಲದ ಫರ್ ಪವರ್ ನಿಂದಾಗಿ ಇದನ್ನು ತಿರಸ್ಕರಿಸಲಾಗಿದೆ ಎಂದು ವರದಿಯಾಗಿದೆ. ಶೀಘ್ರದಲ್ಲಿ ಇಂತಹದ್ದೇ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ವಿಷಯದಲ್ಲಿ ಸೇನೆ ತೀರ್ಮಾನ ಕೈಗೊಳ್ಳಲಿದೆ ಎನ್ನಲಾಗಿದೆ.

ಇಶಾಪೋರ್ ರೈಫಲ್ ಫ್ಯಾಕ್ಟರಿಯಲ್ಲಿ ನಿರ್ಮಿಸಿದ ಈ ಗನ್ ಗಳು ಕಳೆದ ವಾರ ಫೈರಿಂಗ್ ಪರೀಕ್ಷೆಯಲ್ಲಿ ವಿಫಲವಾಗಿದ್ದವು. ಈ ಗನ್ ಗಳಲ್ಲಿ ಹತ್ತು ಹಲವು ದೋಷಗಳು ಕಂಡು ಬಂದಿದ್ದವು. ಹೀಗಾಗಿ ಇವುಗಳನ್ನು ತಿರಸ್ಕರಿಸಲಾಗಿದೆ. ಗುರುವಾರ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಅಸಾಲ್ಟ್ ರೈಫಲ್ ಗಳನ್ನು ಸೇನೆಗೆ ಹೇಗೆ ಸಂಗ್ರಹಿಸಬೇಕು ಎಂಬುದರ ಕುರಿತು ಚರ್ಚಿಸಲು ಸಭೆ ಸೇರಿ ತೀರ್ಮಾನಿಸಲಾಗುತ್ತದೆ ಎಂದು ಸೇನಾ ವಕ್ತಾರರು ತಿಳಿಸಿದ್ದರೆ.