ಓವೈಸಿ ಹೇಳಿಕೆಗೆ ಸೇನೆಯ ಖಡಕ್ ಉತ್ತರ

ಎಐಎಂಐಎಂ ಮುಖ್ಯಸ್ಥ, ಹೈದರಾಬಾದ್ ಸಂಸದ ಅಸದುದ್ದೀನ್ ಓವೈಸಿ ಹೇಳಿಕೆ ಭಾರತೀಯ ಸೇನೆ ತಿರುಗೇಟು ನೀಡಿದೆ. ಸೈನಿಕರನ್ನು ನಾವು ಎಂದೂ ಧರ್ಮದ ಆಧಾರದಲ್ಲಿ ನೋಡಿಲ್ಲ. ನಿಮ್ಮಂತಹ ಕೆಲ ನಾಯಕರೇ ದೃಷ್ಟಿಯಲ್ಲಿ ನೋಡುತ್ತಾರೆ ಎಂದು ಪರೋಕ್ಷವಾಗಿ ಓವೈಸಿಯನ್ನುದ್ದೇಶಿಸಿ ಹೇಳಿದೆ.

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸೇನೆಯ ಉತ್ತರ ವಿಭಾಗ ಲೆಫ್ಟಿನೆಂಟ್ ಜನರಲ್ ದೇವರಾಜ್ ಅನ್ಭು, ನಾವು ಎಂದೂ ಸೇನೆಯನ್ನು ಧಾರ್ಮಿಕ ಆಧಾರದಲ್ಲಿ ನೋಡುವುದಿಲ್ಲ, ಸರ್ವ ಧರ್ಮ ಸ್ಥಳ್ ಎಂಬ ನೀತಿಯನ್ನು ಅನುಸರಿಸುತ್ತೇವೆ. ಆದರೆ ಕೆಲ ನಾಯಕರು ಮಾತ್ರ ಧರ್ಮದ ದೃಷ್ಟಿಯಲ್ಲಿ ನೋಡುತ್ತಾರೆ. ಅಂತಹವರಿಗೆ ಭಾರತೀಯ ಸೈನಿಕರಿಗೆ ಧರ್ಮಿವಿಲ್ಲವೆಂಬುದನ್ನು ತಿಳಿಯದಿರಬಹುದು ಎಂದರು.

ಸಾಕ್ಷಿ ನಾಶಕ್ಕೆ ಯತ್ನ: ಪವರ್ ಮಿನಿಸ್ಟರ್ ಗೆ ಬಂಧನದ ಭೀತಿ

ಸಂಜುವಾನ್ ಉಗ್ರದಾಳಿಯಲ್ಲಿ ಹುತಾತ್ಮರಾದ ಯೋಧರಲ್ಲಿ ಐದು ಜನ ಮುಸ್ಲಿಮರಿದ್ದಾರೆ ಎಂದು ಅಸದುದ್ದೀನ್ ಓವೈಸಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಮುಸ್ಲಿಮರ ರಾಷ್ಟ್ರೀಯತೆಯನ್ನು ಕೆಲ ರಾಷ್ಟ್ರವಾದಿಗಳೆಂದು ಕರೆಸಿಕೊಳ್ಳುವವರು ಪದೇ ಪದೇ ಪ್ರಶ್ನಿಸುತ್ತಿದ್ದಾರೆ. ಸಂಜುವಾನ್ ಉಗ್ರರ ದಾಳಿಯಲ್ಲಿ ಜೀವ ಅರ್ಪಿಸಿದ ಏಳು ಜನರಲ್ಲಿ ಐದು ಜನ ಕಾಶ್ಮೀರಿ ಮುಸ್ಲಿಮರಿದ್ದಾರೆ. ದೇಶಕ್ಕಾಗಿ ನಮಗಿರುವ ಪ್ರೀತಿಯನ್ನು ಪ್ರಶ್ನಿಸುವವರಿಗೆ ಇದೊಂದು ಉತ್ತರಾವಗಲಿ. ದೇಶಕ್ಕಾಗಿ ಮುಸ್ಲಿಮರು ಜೀವ ತ್ಯಾಗ ಮಾಡುತ್ತಿದ್ದರೂ, ಪಾಕೀಸ್ತಾನೀಯರು ಎಂದು ಕರೆಯುತ್ತಿದ್ದಾರೆ. ದೇಶದ ನಿಷ್ಠಯನ್ನು ಸಾಬೀತುಪಡಿಸಿಕೊಳ್ಳುವಂತೆ ಈಗಲೂ ಮುಸ್ಲಿಮರನ್ನು ಕೇಳುತ್ತಿದ್ದಾರೆ ಎಂದು ಓವೈಸಿ ಹೇಳಿದ್ದರು.

Get Latest updates on WhatsApp. Send ‘Subscribe’ to 8550851559