ಬ್ರೇಕಿಂಗ್ ನ್ಯೂಸ್ : ಅರ್ನಾಬ್ ಗೋಸ್ವಾಮಿ ರಾಜೀನಾಮೆ!

ಹಿರಿಯ ಪತ್ರಕರ್ತ ಅರ್ನಬ್ ಗೋಸ್ವಾಮಿ ಪ್ರಸಿದ್ಧ ಸುದ್ದಿ ವಾಹಿನಿ ‘’ ಪ್ರಧಾನ ಸಂಪಾದಕ ಹುದ್ದೆಯಿಂದ ದೂರವಾಗುತ್ತಿದ್ದಾರೆ. ಅವರು ಕೆಲ ದಿನಗಳಿಂದ ಪ್ರೈಮ್ ಟೈಮ್ ಶೋ ‘ದ ನ್ಯೂಸ್ ಅವರ್’ ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇತ್ತೀಚೆಗೆ ನಡೆದ ಎಡಿಟೋರಿಯಲ್ ಸಭೆಯಲ್ಲಿ ಅರ್ನಾಬ್ ತಮ್ಮ ತೀರ್ಮಾನವನ್ನು ಪ್ರಕಟಿಸಿದ್ದರು ಎಂದು ಬಲ್ಲ ಮೂಲಗಳು ಹೇಳುತ್ತಿವೆ. ತಾವೇ ಸ್ವಂತದ್ದು ಏನಾದರೂ ಮಾಡಬೇಕೆಂಬ ಉದ್ದೇಶದಿಂದ ಅವರು ಸಂಪಾದಕ ಹುದ್ದೆಯಿಂದ ಹೊರಬೀಳುತ್ತಿದ್ದಾರೆ ಎನ್ನಲಾಗುತ್ತಿದೆ.

ಚಾನೆಲ್ ನಲ್ಲಿ ಅವರು ನಡೆಸಿಕೊಡುವ ಆವೇಶಭರಿತ ಚರ್ಚೆಗಳು ಪ್ರಸಿದ್ಧವಾಗಿದ್ದು ಎಲ್ಲರಿಗೂ ತಿಳಿದಿದೆ. ಇತ್ತೀಚೆಗೆ ನಡೆದ ಉರಿ ಉಗ್ರರ ದಾಳಿಯ ನಂತರ ಪಾಕಿಸ್ತಾನ ಮತ್ತು ಅ ದೇಶಕ್ಕೆ ಬೆಂಬಲಿಸುವವರ ವಿರುದ್ಧ ಆವೇಶಭರಿತವಾದ ಚರ್ಚೆಗಳನ್ನು ನಡೆಸಿ ಭಲೇ ಎನಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಕೇಂದ್ರ ಸರ್ಕಾರ ‘ವೈ ಶ್ರೇಣಿ’ ಭದ್ರತೆ ಕಲ್ಪಿಸಿತ್ತು. ಇಬ್ಬರು ವೈಯುಕ್ತಿಕ ಭದ್ರತಾ ಸಿಬ್ಬಂದಿ ಸೇರಿದಂತೆ 20 ಭದ್ರತಾ ಸಿಬ್ಬಂದಿ ಅವರಿಗೆ ಭದ್ರತೆ ನೀಡುತ್ತಿದ್ದರು. ಈಗ ಅರ್ನಾಬ್ ವಿಷಯ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿ ಬದಲಾಗುತ್ತಿದೆ.

Related News

loading...
error: Content is protected !!