ಮೀನಿನ ಊಟ ಸೇವಿಸಿ ಅಸ್ವಸ್ಥಗೊಂಡ 400 ಯೋಧರು

ತಿರುವನಂತಪುರಂ: ಮೀನಿನ ಊಟ ಸೇವಿಸಿ ಸುಮಾರು‌ 400 ಸಿಆರ್‌ಪಿಎಫ್ ಯೋಧರು ಅಸ್ವಸ್ಥರಾಗಿರುವ ಘಟನೆ ಶನಿವಾರ ಪಲ್ಲಿಪುರಂ ಬಳಿ ನಡೆದಿದೆ. ವಿಷಾಹಾರ ಸೇವನೆಯಿಂದ ಈ ಘಟನೆ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆ ವರದಿಗಳು ಹೇಳಿವೆ. ವಾಂತಿ ಭೇದಿಗಳಿಂದ ಅಸ್ವಸ್ಥರಾದ ಯೋಧರನ್ನು ನಗರದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.

ಕೆಲವು ಯೋಧರು ಕ್ಯಾಂಪುಗಳಲ್ಲಿ ಕಳಪೆ ಅಹಾರವನ್ನು ನೀಡುತ್ತಿದ್ದಾರೆ ಎಂದು ಈ ಹಿಂದೆ ಸಾಮಾಜಿಕ ತಾಣಗಳಲ್ಲಿ ದೂರಿದ್ದರು.