ಹಾರ್ಧಿಕ್ ಪಟೇಲ್ ವಿರುದ್ಧ ಅರೆಸ್ಟ್ ವಾರೆಂಟ್ – News Mirchi

ಹಾರ್ಧಿಕ್ ಪಟೇಲ್ ವಿರುದ್ಧ ಅರೆಸ್ಟ್ ವಾರೆಂಟ್

ಪಟೀದಾರ್ ಅನಾಮತ್ ಆಂದೋಲನ್ ಸಮಿತಿಯ ಸಂಚಾಲಕ ಹಾರ್ಧಿಕ್ ಪಟೇಲ್ ಗೆ ಕೋರ್ಟ್ ಶಾಕ್ ನೀಡಿದೆ. 2015 ರಲ್ಲಿ ಬಿಜೆಪಿ ಶಾಸಕನರೊಬ್ಬರ ಕಛೇರಿಯನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಬಾರಿಯೂ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಬುಧವಾರ ವಿಸ್ನಾಗರ್ ಕೋರ್ಟ್ ಹಾರ್ಧಿಕ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.

[ಆಧಾರ್ ಜೋಡಣೆ ಮಾಡೋಲ್ಲ ಏನೀಗ: ಮಮತಾ]

ಈ ಪ್ರಕರಣದಲ್ಲಿ ಹಾರ್ಧಿಕ್ ಸೇರಿದಂತೆ ಇನ್ನೂ ಆರು ಜನರಿಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ವಿ.ಪಿ. ಅಗರ್ವಾಲ್ ಆದೇಶಿಸಿದ್ದಾರೆ. ಕೆಲಸದ ಒತ್ತಡಗಳ ಕಾರಣದಿಂದ ಹಾರ್ಧಿಕ್ ಪಟೇಲ್ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ, ಹೀಗಾಗಿ ಆತನಿಗೆ ವೈಯುಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ಹಾರ್ಧಿಕ್ ಪರ ವಕೀಲರು ವಾದಿಸಿದರು ಆದರೆ ನ್ಯಾಯಾಲಯವು ಈ ಮನವಿಯನ್ನು ತಿರಸ್ಕರಿಸಿತು.

Get Latest updates on WhatsApp. Send ‘Add Me’ to 8550851559

Loading...