ಕೇಜ್ರಿ ವಿರುದ್ಧ ಮತ್ತೆ ರೂ.10 ಕೋಟಿ ಮಾನ ನಷ್ಟ ಮೊಕದ್ದಮೆ – News Mirchi

ಕೇಜ್ರಿ ವಿರುದ್ಧ ಮತ್ತೆ ರೂ.10 ಕೋಟಿ ಮಾನ ನಷ್ಟ ಮೊಕದ್ದಮೆ

ನವದೆಹಲಿ: ಕೇಂದ್ರ ಆರ್ಥಿಕ ಸಚಿವ ಅರುಣ್ ಜೇಟ್ಲಿ ಮತ್ತೊಮ್ಮೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಶಾಕ್ ನೀಡಿದ್ದಾರೆ. ಈಗಾಗಲೇ ನ್ಯಾಯಾಲಯದಲ್ಲಿ ಕೇಜ್ರಿವಾಲ್ ವಿರುದ್ಧ ಮಾನ ನಷ್ಟ ಮೊಕದ್ದಮೆ ವಿಚಾರಣೆಯಲ್ಲಿದ್ದು, ವಿಚಾರಣೆ ವೇಳೆ ಕೇಜ್ರಿವಾಲ್ ಪರ ವಕೀಲ್ ರಾಮ್ ಜೇಠ್ಮಲಾನಿ ತಮ್ಮನ್ನು ಉದ್ದೇಶಿಸಿ ಬಳಸಿದ ಪದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಅರುಣ್ ಜೇಟ್ಲಿ, ಇದೀಗ ಮತ್ತೆ 10 ಕೋಟಿ ರೂಪಾಯಿಯ ಮಾನ ನಷ್ಟ ಮೊಕದ್ದಮೆ ಹೂಡಿದ್ದಾರೆ.

ಇದೇ ತಿಂಗಳು 15 ಮತ್ತು 17 ರಂದು ಹೈಕೋರ್ಟಲ್ಲಿ ವಾದವಿವಾದದ ಸಂದರ್ಭದಲ್ಲಿ ಜೇಟ್ಲಿಯವರನ್ನು ಪ್ರಶ್ನಿಸುತ್ತಿದ್ದ ರಾಮ್ ಜೇಠ್ಮಲಾನಿ ಕೀಳು ಮಟ್ಟದ ಪದ ಬಳಕೆ ಮಾಡಿದ್ದಾರೆ, ಓಪೆನ್ ಕೋರ್ಟ್ ನಲ್ಲಿ ಅವರ ಕುರಿತು ಕೆಟ್ಟ ಪದಗಳು ಆರ್ಡರ್ ಪಿಟೀಷನ್ ನಲ್ಲಿಯೂ ದಾಖಲಾಗಿವೆ ಹಾಗಾಗಿ ಮತ್ತೊಂದು ಮಾನನಷ್ಟ ಮೊಕದ್ದಮೆ ಹೂಡಿದ್ದಾಗಿ ಜೇಠ್ಮಲಾನಿ ಪರ ವಕೀಲ ಮನೀಕ್ ದೋಗ್ರಾ ಹೇಳಿದ್ದಾರೆ. ಜೇಟ್ಲಿಯವರನ್ನು ಉದ್ದೇಶಿಸಿ ಬಳಸಿದ ಪದ ಬಳಕೆಯನ್ನು ಕೋರ್ಟ್ ಕೂಡಾ ಖಂಡಿಸಿತ್ತು. ದೆಹಲಿ ಕ್ರಿಕೆಟ್ ಸಂಘ ಹಗರಣ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಮೇಳೆ ಸುಳ್ಳು ಆರೋಪ ಮಾಡಿ ಮಾನ ಹಾನಿ ಮಾಡಿದ್ದಾರೆಂದು ಆರೋಪಿಸಿ ಜೇಟ್ಲಿ ಮಾನ ನಷ್ಟ ಮೊಕದ್ದಮೆ ದಾಖಲಿಸಿದ್ದರು.

Loading...