ಜಿಎಸ್ಟಿ ದರಗಳ ಕುರಿತು ಗೊಂದಲವಿದೆಯೇ, ಮೊಬೈಲಿನಲ್ಲೇ ಇದೆ ಇದಕ್ಕೆ ಪರಿಹಾರ – News Mirchi
We are updating the website...

ಜಿಎಸ್ಟಿ ದರಗಳ ಕುರಿತು ಗೊಂದಲವಿದೆಯೇ, ಮೊಬೈಲಿನಲ್ಲೇ ಇದೆ ಇದಕ್ಕೆ ಪರಿಹಾರ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ತೆರಿಗೆ ಪದ್ದತಿ ಜಿಎಸ್ಟಿ ಯಲ್ಲಿನ ವಿವಿಧ ಸ್ಲ್ಯಾಬ್ ಗಳ ಕುರಿತು ತುಂಬಾ ಜನರಿಗೆ ಹಲವು ಗೊಂದಲಿಗಳಿರುತ್ತವೆ. ಈ ಗೊಂದಲಗಳನ್ನು ಬಗೆಹರಿಸಲೆಂದೇ ಸೆಂಟ್ರಲ್ ಬೋರ್ಡ್ ಆಫ್ ಎಕ್ಸೈಸ್ ಅಂಡ್ ಕಸ್ಟಮ್ಸ್ (ಸಿಬಿಇಸಿ) ಮೊಬೈಲ್ ಆಪ್ ಬಿಡುಗಡೆ ಮಾಡಿದೆ.

ಯಾವುದೇ ವಸ್ತು ಖರೀದಿಸುವ ಗ್ರಾಹಕರು ಜಿಎಸ್ಟಿ ದರಗಳನ್ನು ಖಚಿತಪಡಿಸಿಕೊಳ್ಳಲು ಅನುಕೂಲವಾಗುವಂತೆ ಈ “ಜಿಎಸ್ಟಿ ರೇಟ್ ಫೈಂಡರ್” ಎಂಬ ಮೊಬೈಲ್ ಆಪ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಇದನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಬಿಡುಗಡೆ ಮಾಡಿದ್ದಾರೆ. ಇದರ ಮೂಲಕ ನೀವು ಚಪ್ಪಲಿ ತೆಗೆದುಕೊಂಡರೂ, ಹೋಟೆಲಿನಲ್ಲಿ ತಿಂಡಿ ಬಿಲ್ ಬಂದಾಗಲೂ ಸರಿ ಜಿಎಸ್ಟಿ ದರವನ್ನು ಈ ಮೊಬೈಲ್ ಆಪ್ ನಿಂದ ಚೆಕ್ ಮಾಡಿಕೊಳ್ಳಬಹುದಾಗಿದೆ. ಸದ್ಯ ಆಂಡ್ರಾಯ್ಡ್ ಮೊಬೈಲ್ ಗಳಿಗೆ ಆಪ್ ಬಿಡುಗಡೆ ಮಾಡಲಾಗಿದ್ದು ಗೂಗಲ್ ಪ್ಲೇಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಶೀಘ್ರದಲ್ಲೇ ಐಒಎಸ್ ಮೊಬೈಲ್ ಗಳಿಗೂ ಲಭ್ಯವಾಗಲಿದೆ.

ವಿವಿಧ ವಸ್ತು ಮತ್ತು ಸೇವೆಗಳಿಗೆ ನಿಗದಿಗೊಳಿಸಿರುವ ಜಿಎಸ್ಟಿ ದರಗಳನ್ನು ತಿಳಿದುಕೊಳ್ಳಲು ಈ ಮೊಬೈಲ್ ಅಪ್ಲಿಕೆಷನ್ ಗ್ರಾಹಕರಿಗೆ ಬಹಳ ಉಪಯೋಗವಾಗುತ್ತದೆ. ಇದು ಕಾರ್ಯನಿರ್ವಹಿಸಲು ಇಂಟರ್ನೆಟ್ ಬೇಕೇ ಬೇಕು ಅನ್ನುವ ಹಾಗಿಲ್ಲ. ಆಫ್ಲೈನ್ ನಲ್ಲೂ ಕೆಲಸ ಮಾಡುತ್ತದೆ. ಗ್ರಾಹಕರು ಯಾವುದಾದರೂ ವಸ್ತು ಅಥವಾ ಸೇವೆಯ ಹೆಸರನ್ನು ಟೈಪ್ ಮಾಡುವ ಅಥವಾ ಸೇವೆ/ವಸ್ತುವನ್ನು ಆಯ್ಕೆ ಮಾಡುವ ಮೂಲಕ ಮಾಹಿತಿ ಪಡೆಯಬಹುದು. ಹೆಸರನ್ನು ಟೈಪ್ ಮಾಡಿ ಸಬ್ಮಿಟ್ ಮಾಡುತ್ತಿದ್ದಂತೆ ಫಲಿತಾಂಶದಲ್ಲಿ ಹಲವು ವಸ್ತು ಮತ್ತು ಸೇವೆಗಳು ಕಾಣಿಸಿಕೊಳ್ಳುತ್ತವೆ. ಬಳಕೆದಾರರು ಬೇಕಾದ ವಸ್ತು/ಸೇವೆಯನ್ನು ಆಯ್ಕೆ ಮಾಡಿ ಮಾಹಿತಿ ಪಡೆಯಬಹುದು.

ಸೆಂಟ್ರಲ್ ಬೋರ್ಡ್ ಆಫ್ ಎಕ್ಸೈಸ್ ಅಂಡ್ ಕಸ್ಟಮ್ಸ್ (ಸಿಬಿಇಸಿ) ತೆರಿಗೆದಾರರಿಗೆ ಅನುಕೂಲವಾಗುವಂತೆ ತನ್ನ ವೆಬ್ಸೈಟ್ www.cbec-gst.gov.in ನಲ್ಲಿಯೂ ಜಿಎಸ್ಟಿ ಪ್ರಕಟಿಸಿದೆ. ಇವು ಕೇವಲ ತೆರಿಗೆದಾರರಿಗೆ ಮಾತ್ರವಲ್ಲದೆ, ದೇಶದ ಪ್ರತಿ ನಾಗರಿಕನಿಗೂ ಜಿಎಸ್ಟಿ ದರಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತವೆ.

Contact for any Electrical Works across Bengaluru

Loading...
error: Content is protected !!