ಮೋದಿಯನ್ನು ದೇವರೂ ಕ್ಷಮಿಸುವುದಿಲ್ಲ

ನವದೆಹಲಿ: ಹಳೆಯ ನೋಟು ರದ್ದು ಮಾಡಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದ ಪ್ರಧಾನ ಮಂತ್ರಿಯನ್ನು ದೇವರೂ ಕೂಡಾ ಕ್ಷಮಿಸುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ.

ನಿನ್ನೆ ಮತ್ತು ಇಂದು ಬ್ಯಾಂಕುಗಳ ಮುಂದೆ ಸಾಲಿನಲ್ಲಿ ನಿಂತಿರುವುದು ಜನಸಾಮಾನ್ಯರೇ ಹೊರತು ಶ್ರೀಮಂತರಲ್ಲ ಎಂದು ಹೇಳಿದರು. ಸಾವಿರ ರೂಪಾಯಿ ರದ್ದು ಮಾಡಿದ್ದರಿಂದ ನಿರ್ಮೂಲನೆಯಾಗುವುದಿಲ್ಲ. ಸಾವಿರದ ನೋಟು ರದ್ದುಪಡಿಸಿ 2000 ರ ನೋಟು ಬಿಡುಗಡೆ ಮಾಡಿದರೆ ಭಷ್ಟಾಚಾರ ಹೇಗೆ ನಿರ್ಮೂಲನೆಯಾಗುತ್ತದೆ ಎಂದು ಪ್ರಶ್ನಿಸಿದರು. ಕೋಟ್ಯಾಧೀಶರು, ಹೊಂದಿರುವವರು ಪರ್ಯಾಯ ಮಾರ್ಗ ಕಂಡುಕೊಳ್ಳುತ್ತಾರೆ ಎಂದು ಆರೋಪಿಸಿದರು.

ವಿದೇಶಗಳಲ್ಲಿ ಇರುವ ಕಪ್ಪು ಹಣವನ್ನು ತರುವಲ್ಲಿ ವಿಫಲವಾದ ಮೋದಿ, ಜನರ ಗಮನ ಬೇರೆಡೆ ಸೆಳೆಯಲು ದೊಡ್ಡ ನೋಟು ರದ್ದು ಪಡಿಸಿದ್ದಾರೆ ಎಂದು ಆರೋಪ ಮಾಡಿದರು. ಸ್ವಿಸ್ ಬ್ಯಾಂಕ್ ನಲ್ಲಿ ಕೊಳೆಯುತ್ತಿರುವ ಕಪ್ಪು ಹಣವನ್ನು ವಾಪಸ್ ತರುತ್ತಿಲ್ಲವೇಕೆ? ಎಂದು ಪ್ರಶ್ನಿಸಿದ ಅವರು, ಹೊಸ ನೋಟು ಬಿಡುಗಡೆಯಾಗುತ್ತಿದ್ದಂತೆ ಕೋಟ್ಯಾಧೀಶರ ಮನೆಗೆ ಡೋರ್ ಡೆಲಿವರಿ ಆಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache