ಕೇಜ್ರಿವಾಲ್ ಗೆ 10 ಸಾವಿರ ದಂಡ ವಿಧಿಸಿದ ದೆಹಲಿ ಹೈಕೋರ್ಟ್ |News Mirchi

ಕೇಜ್ರಿವಾಲ್ ಗೆ 10 ಸಾವಿರ ದಂಡ ವಿಧಿಸಿದ ದೆಹಲಿ ಹೈಕೋರ್ಟ್

ಅರುಣ್ ಜೇಟ್ಲಿ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ದೆಹಲಿ ಹೈಕೋರ್ಟ್ ರೂ.10,000 ದಂಡ ವಿಧಿಸಿದೆ. ನಿಗದಿತ ಸಮಯದೊಳಗೆ ಉತ್ತರ ನೀಡದ ಕಾರಣಕ್ಕೆ ಈ ದಂಡ ವಿಧಿಸಲಾಗಿದೆ. 2 ವಾರಗಳಲ್ಲಿ ದಂಡ ಪಾವತಿಸಿ ದೂರಿನ ಕುರಿತು ವಿವರಣೆ ನೀಡಬೇಕು ಎಂದು ಕೋರ್ಟ್ ಜಾಯಿಂಟ್ ರಿಜಿಸ್ಟ್ರಾರ್ ಪಂಕಜ್ ಗುಪ್ತಾ ಕೇಜ್ರಿವಾಲ್ ಗೆ ಸೂಚಿಸಿದ್ದಾರೆ. ವಿಚಾರಣೆ ವೇಳೆ ಅರುಣ್ ಜೇಟ್ಲಿ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ ಕಾರಣಕ್ಕೆ ಕೇಜ್ರಿವಾಲ್ ವಿರುದ್ಧ ಎರಡನೇ ದೂರು ದಾಖಲಾಗಿತ್ತು.

ಕೇಜ್ರಿವಾಲ್ ಜೊತೆ ಆ ಪಕ್ಷದ ಇನ್ನೂ ಐದು ನಾಯಕರ ವಿರುದ್ಧ ಜೇಟ್ಲಿ ಹಾಕಿದ್ದ ಮತ್ತೊಂದು ಮಾನನಷ್ಟ ಮೊಕದ್ದಮೆ ವಿಚಾರಣೆ ಸಂದರ್ಭದಲ್ಲಿಯೇ ಕೇಜ್ರಿವಾಲ್ ಪರ ವಕೀಲ್ ರಾಮ್ ಜೇಠ್ಮಲಾನಿ ಜೇಟ್ಲಿಯವರನ್ನು ಆಕ್ಷೇಪಾರ್ಹ ಪದ ಬಳಸಿ ದೂಷಿಸಿದ್ದರು. ಹೀಗಾಗಿ ಜೇಟ್ಲಿ ಆಮ್ ಆದ್ಮಿ ಪಕ್ಷದ ನಾಯಕನ ವಿರುದ್ಧ ಮತ್ತೊಂದು ಕೇಸು ದಾಖಲಿಸಿದ್ದರು.

ಕೇಜ್ರಿ ವಿರುದ್ಧ ಮತ್ತೆ ರೂ.10 ಕೋಟಿ ಮಾನ ನಷ್ಟ ಮೊಕದ್ದಮೆ

ಇದಕ್ಕೂ ಮುನ್ನ ಕೇಜ್ರಿವಾಲ್ ಅವರ ಕೇಸಿನಿಂದ ಹಿಂಜರಿಯುತ್ತಿರುವುದಾಗಿ ವಕೀಲ್ ರಾಮ್ ಜೇಠ್ಮಲಾನಿ ಘೋಷಿಸಿದ್ದಾರೆ. ನನಗೆ ಫೀಸ್ ನೀಡದಿದ್ದರೂ ಪರವಾಗಿಲ್ಲ, ಸಾವಿರಾರು ಜನರಿಗೆ ಉಚಿತವಾಗಿ ವಾದ ಮಾಡಿದ್ದೇನೆ, ಆದರೆ ನನಗೆ ಯಾವುದೇ ಸೂಚನೆ ನೀಡಲ್ಲವೆಂದು ಹೇಳುವ ಮೂಲಕ ಕೇಜ್ರಿವಾಲ್ ಸುಳ್ಳು ಹೇಳಿದ್ದಾರೆ ಎಂದು ಜೇಠ್ಮನಲಾನಿ ಆರೋಪಿಸಿದ್ದಾರೆ.

Loading...
loading...
error: Content is protected !!